ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: 16–9–1997, ಮಂಗಳವಾರ

Last Updated 15 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬರ, ಮಳೆ ಹಾವಳಿ ಪರಹಾರಕ್ಕೆ ₹60 ಕೋಟಿ ಬಿಡುಗಡೆ

ಬೆಂಗಳೂರು, ಸೆ. 15– ರಾಜ್ಯದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ₹60 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣಕಾಸು ನೆರವನ್ನು ಕೋರಿ ಮನವಿ ಸಲ್ಲಿಸಲು ಇಂದು ಇಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿತು.

ತೈಲಾಗಾರ: ಆರದ ಬೆಂಕಿ ಜ್ವಾಲೆ

ವಿಶಾಖಪಟ್ಟಣ, ಸೆ. 15 (ಪಿಟಿಐ)– ಇಲ್ಲಿನ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನಲ್ಲಿ ನಿನ್ನೆ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಸತ್ತವರ ಸಂಖ್ಯೆ 38ಕ್ಕೆ ಏರಿದೆ. ಈ ಮಧ್ಯೆ ಅಗ್ನಿಶಾಮಕ ದಳ ಕಾರ್ಯಾಚರಣೆ ಮುಂದುವರಿಸಿದ್ದು, ಬೆಂಕಿ ಹತೋಟಿಗೆತರಲು ಸಮರೋಪಾದಿಯಲ್ಲಿ ಹೋರಾಡುತ್ತಿದೆ.

ಬೆಂಕಿ ದುರಂತದಿಂದ ಆಗಿರುವ ನಷ್ಟದ ಪ್ರಮಾಣವನ್ನು ಇನ್ನೂ ಅಂದಾಜು ಮಾಡಬೇಕಿದೆ ಎಂದು ಎಚ್‌ಪಿಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ. ಸುಮಾರು ₹ 300ರಿಂದ ₹ 500 ಕೋಟಿ ನಷ್ಟ ಸಂಭವಿಸಿರಬಹುದು ಎಂದು ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ.

ರೈಲು ದುರಂತ: ಸತ್ತವರ ಸಂಖ್ಯೆ 81ಕ್ಕೆ ಏರಿಕೆ

ಭೋಪಾಲ್‌, ಸೆ. 15– ನಿನ್ನೆ ರೈಲು ದುರಂತ ಸಂಭವಿಸಿದ ಬಿಲಾಸ್‌ಪುರದ ಚಂಪಾದಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಮುಂದುವರೆದಿದೆ. ದುರಂತದಲ್ಲಿ ಸಾವಿಗೀಡಾದವರಮತ್ತಷ್ಟ ದೇಹಗಳು ಇಂದು ಪತ್ತೆಯಾಗಿದ್ದು, ಒಟ್ಟು 81 ಮೃತದೇಹಗಳು ದೊರಕಿವೆ.

ಕೇಂದ್ರ ರೈಲ್ವೆ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರು ಇಂದು ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT