ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಮಂಗಳವಾರ, 4–4–1972

Last Updated 3 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಕುಡಿಯುವ ನೀರಿಗೆ ಪ್ರಸ್ತುತ ಬೇಸಿಗೆಯಲ್ಲಿ ಕಳವಳ ಅನಗತ್ಯ: ನಗರದ ಜನತೆಗೆ ಆಶ್ವಾಸನೆ

ಬೆಂಗಳೂರು, ಏ. 3– ನಗರದ ಪೌರರು ಈ ವರ್ಷವೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕಳವಳ ಪಡಬೇಕಾಗಿಲ್ಲ. ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಜಲಾಶಯಗಳಲ್ಲಿ 400 ದಿನಗಳಿಗೆ ಆಗುವಷ್ಟು ನೀರು ದಾಸ್ತಾನಿದೆ.

ನಗರದ ನೀರು ಸರಬರಾಜು ಪರಿಸ್ಥಿತಿಯನ್ನು ಇಂದು ಇಲ್ಲಿ ಸುದ್ದಿಗಾರರಿಗೆ ವಿವರಿಸಿದ ಜಲಮಂಡಳಿ ಅಧ್ಯಕ್ಷ ಐ.ಎಂ.ಮುಗ್ದುಂ ಅವರು, ‘ನಮಗೆ ಇರುವ ಒಂದು ತೊಂದರೆ ಎಂದರೆ ನೀರನ್ನು ನಗರಕ್ಕೆ ಪಂಪ್‌ ಮಾಡುವ ಮಿತಿ’ ಎಂದರು.

ಭೂ ಸುಧಾರಣೆ: ಕೇಂದ್ರ

ಶಾಸನ ಅಸಾಧ್ಯ– ಶಿಂಧೆ

ನವದೆಹಲಿ, ಏ. 3– ಭೂ ಸುಧಾರಣೆಗೆ ಸಂಬಂಧಿಸಿದಂತೆ ಸಮಗ್ರ ರಾಷ್ಟ್ರಕ್ಕೆ ಅನ್ವಯವಾಗುವಂಥ ಯಾವುದೇ ಕಾನೂನನ್ನು ಸಂಸತ್‌ ಅಂಗೀಕರಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಆಹಾರ ಖಾತೆ ಸ್ಟೇಟ್‌ ಸಚಿವ ಶ್ರೀ ಎ.ಪಿ.ಶಿಂಧೆ ಅವರು ಇಂದು ಲೋಕಸಭೆಗೆ ತಿಳಿಸಿದರು.

ಈ ವಿಷಯವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಶ್ನೆ. ಭೂ– ಪರಿಮಿತಿಯನ್ನು ತಗ್ಗಿಸುವ ಬಗ್ಗೆ ನಾನಾ ರಾಜ್ಯಗಳು ಈಗಾಗಲೇ ಕಾನೂನು ಅಂಗೀಕರಿಸಿವೆ ಅಥವಾ ಅಂಗೀಕರಿಸುವ ಹಾದಿಯಲ್ಲಿವೆ ಎಂದೂ ಅವರು ಶ್ರೀ ಎಚ್‌.ಸಿ.ಕಚವಾಯಿ ಅವರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT