ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ

Last Updated 3 ಜುಲೈ 2022, 19:11 IST
ಅಕ್ಷರ ಗಾತ್ರ

ಹಾಲಿನಲ್ಲಿ ಹುಳು; ಕಾರ್ಮಿಕರ ಕೈವಾಡ

ಬೆಂಗಳೂರು, ಜುಲೈ 3 – ಬೆಂಗಳೂರು ಡೈರಿಯ ‘ಹಾಲಿನಲ್ಲಿ ಹುಳು’ ಪ್ರಸಂಗ ವ್ಯಾನಿನಲ್ಲಿ ಬರುತ್ತಿದ್ದ ಮೂವರು ಕೆಲಸಗಾರರು ನೀರು ಮತ್ತು ಡಬಲ್‌ ಟೋನ್ಡ್‌ ಮಿಲ್ಕ್‌ ಬೆರೆಸಿ ಅಕ್ರಮ ಮಾಡುತ್ತಿ‌ದ್ದ ಪ್ರಕರಣದಿಂದಾಗಿದೆಯೆಂದು ಪತ್ತೆಹಚ್ಚಲಾಗಿದೆಯೆಂದೂ ಆ ಮೂವರು ಕಾರ್ಮಿಕರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೆಂದೂ ಪಶುಸಂಗೋಪನ ಸಚಿವ ಶ್ರೀ ಎನ್‌. ಚಿಕ್ಕೇಗೌಡ ಅವರು ಇಂದು ವಿಧಾನಸಭೆಗೆ ವಿವರಣೆ ನೀಡಿದರು.

ಮೊನ್ನೆ ಶ್ರೀ ವಾಟಾಳ್ ನಾಗರಾಜ್‌ ಅವರು ಎತ್ತಿದ್ದ ವಿಚಾರದ ಬಗ್ಗೆ ಹೇಳಿಕೆ ನೀಡಿದ ಸಚಿವರು ಶೇಷಾದ್ರಿಪುರಕ್ಕೆ ಬೆಳಿಗ್ಗೆ 5 ಗಂಟೆಗೆ ಹಾಲು ಬರುತ್ತಿದ್ದು ಶ್ರೀಮತಿ ಬಿ.ವಿ. ಲಲಿತ ಎಂಬ ಸಬ್‌ ಏಜೆಂಟರಿಂದ ಹಾಲುಕೊಂಡ ಶ್ರೀ ಎ.ವಿ. ತಲಾಂಗ್‌ ಎಂಬುವವರು ಹುಳು ಇದ್ದದ್ದನ್ನು ತಂದು ಪೊಲೀಸು ಠಾಣೆಗೆ ದೂರು ಕೊಟ್ಟರೆಂದೂ ಹೇಳಿದರು.

ಸದನ ಸಮೀಕ್ಷೆ

ಬೆಂಗಳೂರು, ಜುಲೈ 3 – ಆಡಳಿತ ಯಂತ್ರದ ಮನೋಭಾವ ಬದಲಾಣೆಯಾಗದೆ ‘ಹತ್ತಲ್ಲ ನೂರು ಇಂದಿರಾ ಗಾಂಧಿ ಬಂದರೂ ಸಮಾಜವಾದ ಸಾಧ್ಯವಿಲ್ಲ’

– ಕಾಂಗ್ರೆಸ್‌ ಸದಸ್ಯ ಶ್ರೀ ಶೀರ್‍ನಾಳಿ ಚಂದ್ರಶೇಖರ್‌ ಕೂಗಿ ಹೇಳಿದರು.

ಸೋಮವಾರ ವಿಧಾನ ಸಭೆಯಲ್ಲಿ ಸಾರ್ವತ್ರಿಕ ಆಡಳಿತ ಇಲಾಖೆ ಬೇಡಿಕೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಎಲ್ಲ ಬಯಸಿದ್ದೂ ಈ ಯಂತ್ರದ ಸುಧಾರಣೆಯನ್ನ. ಎಲ್ಲಾ ಕೊಟ್ಟಿದ್ದೂ ಈ ಎಚ್ಚರಿಕೆಯನ್ನ. ಸದ್ಯದ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಹಿಂದಿನ ದಾಟಿಯನ್ನೇ ಹಿಡಿದಿದ್ದೀರಿ? – ಇದು ವಿರೋಧಿ ಸದಸ್ಯರ ಟೀಕೆ, ಆಕ್ರೋಶ.

ಜೊತೆಗೆ ನೀರಾವರಿ, ಪೊಲೀಸು ಹಾಗೂ ಜೈಲುಗಳ ಬೇಡಿಕೆಗಳೂ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT