ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ, 22–07–1972

Last Updated 21 ಜುಲೈ 2022, 15:47 IST
ಅಕ್ಷರ ಗಾತ್ರ

ಕಾವೇರಿ ಯೋಜನೆ ಮುಂದುವರಿಕೆ ಅಂತರರಾಜ್ಯ ಒಪ್ಪಂದಕ್ಕೆ ಭಂಗ ತರದು

ಬೆಂಗಳೂರು, ಜುಲೈ 21– ಕಾವೇರಿ ಯೋಜನೆ ಗಳ ಮುಂದುವರಿಕೆ ಯಾವ ರೀತಿಯಲ್ಲೂ ಈಚಿನ ಅಂತರರಾಜ್ಯದ ಒಪ್ಪಂದಕ್ಕೆ ಭಂಗ ತರುವುದಿಲ್ಲ ಎಂದು ವಿಧಾನಸಭೆಯಲ್ಲಿ ಇಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು, ಈ ಸಂಬಂಧ ದಲ್ಲಿ ಕಾವೇರಿ ಅಂಕೆ ಸಂಖ್ಯೆ ಸಂಗ್ರಹ ಸಮಿತಿಯ ಸದಸ್ಯ ಶ್ರೀ ಅಹುಜಾ ಅವರು ತಿರುವನಂತಪುರದಲ್ಲಿ ಮಾಡಿದ ಹೇಳಿಕೆಗೆ ಆಕ್ಷೇಪ ಎತ್ತಿದ್ದಾರೆ.

6 ತಿಂಗಳುಗಳ ಕಾಲ ನೀರನ್ನು ಹೆಚ್ಚಾಗಿ ಸಂಗ್ರಹಿಸಬಾರದು, ಇಲ್ಲವೇ ಉಪಯೋಗಿ ಸಬಾರದು ಎಂಬುದು ಮಾತ್ರ ಒಪ್ಪಂದದ ಅಂಶ; ಇದನ್ನು ನಾವು ಅಕ್ಷರಶಃ ಪಾಲಿಸುತ್ತಿ ದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಹೆಸರು ‘ಕರ್ನಾಟಕ’ ಕಾಂಗ್ರೆಸ್ ಪಕ್ಷದಲ್ಲಿ ಬಹುಮತ

ಬೆಂಗಳೂರು, ಜುಲೈ 21– ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಾಯಿಸಲುಕಾಂಗ್ರೆಸ್ ಶಾಸಕಾಂಗ ಪಕ್ಷ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT