ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ 14.1.1972

Last Updated 13 ಜನವರಿ 2022, 19:30 IST
ಅಕ್ಷರ ಗಾತ್ರ

‘ಗೌರವಯುತ ಶಾಂತಿ’: ಭಾರತಕ್ಕೆ ಭುಟ್ಟೊ ಕರೆ

ನವದೆಹಲಿ, ಜ. 13– ‘‘ಭಾರತದ ಜೊತೆ ಶಾಂತಿ, ಸ್ನೇಹದಿಂದ ಬಾಳಲು ಪಾಕಿಸ್ತಾನ ಇಚ್ಚಿಸಿದೆ. ಆದರೆ ಈ ಶಾಂತಿ ‘ಮರ್ಯಾದೆ’ಯೊಡನೆ ನೆಲೆಗೊಳ್ಳಬೇಕು’’ ಎಂದು ಅಧ್ಯಕ್ಷ ಭುಟ್ಟೊ ಇಂದು ತಿಳಿಸಿದುದಾಗಿ ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ.

ಮರ್ಯಾದೆಯೊಡನೆ ಬಾಳಲು ಪಾಕಿಸ್ತಾನಕ್ಕೆ ಅವಕಾಶ ನೀಡದಿದ್ದೆ ‘ಇತರ ಕ್ರಮಗಳನ್ನು’ ಪಾಕಿಸ್ತಾನವು ಕೈಗೊಳ್ಳಬೇಕಾಗುತ್ತದೆಂದೂ ಭುಟ್ಟೊ ಅವರು ಹಸೇನಿವಾಲಾ ವಿಭಾಗದಲ್ಲಿನ ಮುಂಚೂಣಿ ಪ್ರದೇಶದಲ್ಲಿ ಸೈನ್ಯಾಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಪಾಕಿಸ್ತಾನದ ಅಸ್ತಿತ್ವವನ್ನೇ ಭಾರತವು ಒಪ್ಪಿಕೊಂಡಿಲ್ಲವೆಂದು ಮತ್ತೊಮ್ಮೆ ಅಪಾದಿಸಿದ ಭುಟ್ಟೊ ಭಾರತವು ಕಳೆದ 24 ವರ್ಷಗಳಲ್ಲಿ ಮೂರು ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆಯೆಂದು ತಿಳಿಸಿದರು.

ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಿದ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಬಾಂಧವ್ಯ ರದ್ದು: ಪಾಕ್‌ ನಿರ್ಧಾರ

ರಾವಲ್ಪಿಂಡಿ, ಜ. 13– ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಿದ ಬಲ್ಗೇರಿಯಾ ಜೊತೆ ಪಾಕಿಸ್ತಾನ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದು ಕೊಂಡಿದೆ.

ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡುವ ದುಡುಕಿನ ಕ್ರಮವೇ ಪಾಕಿಸ್ತಾನ ಬಲ್ಗೇರಿಯಾ ಜೊತೆ ಬಾಂಧವ್ಯ ಕಡಿದುಕೊಳ್ಳಲು ಕಾರಣವೆಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT