ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ, 7–1–1972

Last Updated 6 ಜನವರಿ 2022, 19:30 IST
ಅಕ್ಷರ ಗಾತ್ರ

‘ಭಾರತದ ಬಗ್ಗೆ ಗಡಸು ನೀತಿ ತಾಳಲು ನಿಕ್ಸನರೇ ಆದೇಶ ನೀಡಿದ್ದರು’

ವಾಷಿಂಗ್ಟನ್‌, ಜ. 6– ಇತ್ತೀಚೆಗೆ ಭಾರತ– ಪಾಕಿಸ್ತಾನ ನಡುವೆ ಘರ್ಷಣೆ ಸಂಭವಿಸಿದ ಸಮಯದಲ್ಲಿ ಭಾರತದ ಬಗ್ಗೆ ಗಡುಸು ನೀತಿ ಅನುಸರಿಸುವಂತೆ ಅಧ್ಯಕ್ಷ ನಿಕ್ಸನ್‌ ಅವರೇ ತಮ್ಮ ಸರ್ಕಾರಕ್ಕೆ ಆದೇಶ ನೀಡಿದ್ದರು ಪತ್ರಕರ್ತ ಜಾಕ್‌ ಆಂಡರ್‌ಸನ್‌ ಹೊರಗೆಡವಿದ್ದಾರೆ.

ಅಧ್ಯಕ್ಷ ನಿಕ್ಸನ್‌ರು ಪಾಕಿಸ್ತಾನದ ಬಗ್ಗೆ ಒಲವು ತೋರಲು ಬಯಸಿದ್ದರು ಎಂದು ನಿಕ್ಸನ್‌ರ ವಿಶೇಷ ಸಲಹೆಗಾರ ಹೆನ್ರಿ ಕಿಸಿಂಜರ್‌ ಸೂಚಿಸಿದ್ದ ರಹಸ್ಯ ಪತ್ರವೊಂದು ಅವರಿಗೆ ದೊರೆತಿದೆ.

ಇದರ ಜೊತೆಗೆ, ಭಾರತ–ಪಾಕ್‌ ಸಮರದ ಬಗ್ಗೆ ಅಮೆರಿಕದ ನೀತಿಯನ್ನು ನಿರೂಪಿಸುವ ಸರ್ಕಾರದ ಇನ್ನೆರಡು ರಹಸ್ಯ ಪತ್ರಗಳನ್ನೂ ವಶಪಡಿಸಿಕೊಂಡಿರುವ ಆಂಡರ್‌ಸನ್‌ ಅವರು ಅವುಗಳ ಆಧಾರದ ಮೇಲೆ ಸರ್ಕಾರದ ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ.

ಕೆಲವು ತಿಂಗಳಲ್ಲೇ ಹೊಸ ಆವರಣಕ್ಕೆ ನಗರ ವಿ.ವಿ ನಿಲಯ

ಬೆಂಗಳೂರು, ಜ. 6– ಬೆಂಗಳೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದಕ್ಕೆ ಅದು ಸೂಕ್ತ ವಾತಾವರಣ ಹೊಂದದಿರುವುದೇ ಕಾರಣವೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಇಲ್ಲಿ ನುಡಿದು ನಾಗರಬಾವಿಯ ನೂತನ ಆವರಣದಲ್ಲಿ ಅದರ ಪ್ರಗತಿ ಶೀಘ್ರವಾಗಿ ನಡೆಯಲೆಂದು ಹಾರೈಸಿದರು.

ನಾಗರಬಾವಿಯಲ್ಲಿ ಸುಮಾರು ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಜಿಯಾಲಜಿ ವಿಭಾಗದ ಕಟ್ಟಡಕ್ಕೆ ಆಸ್ತಿ ಭಾರ ಹಾಕಿದ ರಾಜ್ಯಪಾಲರು, ಬೇಗನೆ ಹೊಸ ಆವರಣಕ್ಕೆ ವಿಶ್ವವಿದ್ಯಾನಿಲಯ ವರ್ಗಾಯಿಸುವಂತಾಗಲೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT