ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶುಕ್ರವಾರ, 21.1.1972

Last Updated 20 ಜನವರಿ 2022, 16:22 IST
ಅಕ್ಷರ ಗಾತ್ರ

ಆಹಾರ ಉತ್ಪಾದನೆ: ವಿದೇಶಿ ತಜ್ಞರ ಭವಿಷ್ಯ ಸುಳ್ಳು ಮಾಡಿದ ವಿಕ್ರಮ

ಷಿಲ್ಲಾಂಗ್‌, ಜ. 20– ಇಂದು ಮುಗಿಲು ಮುಟ್ಟಿದ ದೀರ್ಘ ಹರ್ಷೋದ್ಗಾರಗಳ ಮಧ್ಯೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಮೇಘಾಲಯ ರಾಜ್ಯವನ್ನು ಉದ್ಘಾಟಿಸಿದರು.

ಹಿಂದೆಅಸ್ಸಾಮಿನ ಭಾಗವಾಗಿದ್ದ ಖಾಸಿ, ಜಯಂತಿಯ ಮತ್ತು ಗಾರೋ ಗುಡ್ಡಗಾಡು ಪ್ರದೇಶ ಸೇರಿ ಈಗ ಮೇಘಾಲಯ ರಾಜ್ಯವಾಗಿದೆ.

ಪೂರ್ಣ ಸ್ಥಾನಮಾನದ ಈ ರಾಜ್ಯವನ್ನು ಉದ್ಘಾಟಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿಯವರು, ಹೊಸ ರಾಜ್ಯ ಈ ಪ್ರದೇಶದ ನಿವಾಸಿಗಳಿಗೆ ಐತಿಹಾಸಿಕ ಮಹತ್ವದ ಘಟನೆಯಂದು ನುಡಿದು ಇದು ಹೊಸ ಅವಕಾಶಗಳ ಬಾಗಿಲನ್ನು ತೆರೆದಿದೆಯೆಂದರು.

ಭಾರತದಲ್ಲಿ ಕ್ಷಾಮ ಉಂಟಾಗುವುದೆಂದು ಎರಡುವರ್ಷಗಳಹಿಂದೆಬ್ರಿಟನ್‌ ಮತ್ತು ಅಮೆರಿಕದ ಕೆಲವು ತಜ್ಞರುಗಳು ನುಡಿದಿದ್ದ ಭವಿಷ್ಯಕ್ಕೆ ತದ್ವಿರುದ್ಧವಾಗಿ ಕಳೆದ ವರ್ಷ ಭಾರತ ಆಹಾರಧಾನ್ಯಗಳ ಬೆಳೆಯಲ್ಲಿ ವಿಕ್ರಮ ಸ್ಥಾಪಿಸಿತೆಂದು ಶ್ರೀಮತಿ ಗಾಂಧಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT