ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಬುಧವಾರ 12.1.1972

Last Updated 11 ಜನವರಿ 2022, 19:30 IST
ಅಕ್ಷರ ಗಾತ್ರ

ಅಮೆರಿಕ ನೆರವು ನಿಂತರೂ ಆರ್ಥಿಕ ಪ್ರಗತಿಗೆ ಧಕ್ಕೆ ಇಲ್ಲ

ನವದೆಹಲಿ, ಜ. 11– ಅಮೆರಿಕ ನೆರವು ರದ್ದುಪಡಿಸಿದ್ದರಿಂದ ಉಂಟಾದ ಪರಿಸ್ಥಿತಿಯನ್ನು ಭಾರತವು ಯಶಸ್ವಿಯಾಗಿ ಎದುರಿಸುವುದು ಎಂದು ಅಧಿಕೃತ ವಕ್ತಾರರು ಇಂದು ಇಲ್ಲಿ ತಿಳಿಸಿದರು.

ಭಾರತವು ಮೊದಲು ಊಹಿಸಿದ್ದಂತೆ ಅಂತಹ ಕಷ್ಟ ಪರಿಸ್ಥಿತಿಯಲ್ಲೇನಿಲ್ಲ. ನೆರವು ನಿಂತರೂ ಆರ್ಥಿಕ ರಂಗದ ಉತ್ಕರ್ಷ ಕಡಿಮೆಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಉಕ್ಕು, ಗೊಬ್ಬರ, ಬಿಡಿ ಭಾಗಗಳು, ಪೆಟ್ರೋಲಿಯಂ ಉತ್ಪನ್ನ, ಮುದ್ರಣ ಕಾಗದ ಮುಂತಾದ ಐದಾರು ಉದ್ಯಮಗಳಲ್ಲಿ ತೊಂದರೆಯಾಗುವ ನಿರೀಕ್ಷೆ ಇದೆ ಎಂದರು.

ನೆರೆ ರಾಜ್ಯಗಳಿಗೆ ಮೈಸೂರಿನಿಂದ ವಿದ್ಯುತ್‌ ಬೇಡಿಕೆ ಖೋತ ಸಂಭವ

ನವದೆಹಲಿ, ಜ. 11– ಮೈಸೂರು ತನ್ನ ನೆರೆಯ ರಾಜ್ಯಗಳಿಗೆ ಕಳೆದ ವರ್ಷ ನೀಡಿದಷ್ಟು ವಿದ್ಯುತ್‌ನ್ನು ಈ ವರ್ಷ ಸರಬರಾಜು ಮಾಡಲು ಸಾಧ್ಯವಾಗದಿರಬಹುದೆಂದು ರಾಜ್ಯದ ವಿದ್ಯುತ್‌ ಮಂಡಳಿ ಮುಖ್ಯ ಎಂಜಿನಿಯರ್‌ ಎಂ.ಎ. ಷರೀಫ್‌ ಇಂದು ಇಲ್ಲಿ ತಿಳಿಸಿದರು.

ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಮತ್ತು ಗೋವಾಕ್ಕೆ ಕಳೆದ ವರ್ಷ ಸುಮಾರು 800 ದಶಲಕ್ಷ ಕಿಲೊವಾಲ್ಟ್‌ಗಳಷ್ಟು ವಿದ್ಯುತ್‌ ಸರಬರಾಜು ಮಾಡಲಾಗಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT