ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 20.5.1972

Last Updated 19 ಮೇ 2022, 19:45 IST
ಅಕ್ಷರ ಗಾತ್ರ

ಇಂದಿರಾ ಐರೋಪ್ಯ ಪ್ರವಾಸದ ನಂತರ ಭಾರತ– ಪಾಕ್ ಶೃಂಗಸಭೆ

ನವದೆಹಲಿ, ಮೇ 19– ಮುಂದಿನ ತಿಂಗಳ ಅಂತ್ಯದಲ್ಲಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಕೆಲವು ಐರೋಪ್ಯ ದೇಶಗಳಿಗೆ ಭೇಟಿ ಕೊಟ್ಟು ಭಾರತಕ್ಕೆ ಹಿಂದಿರುಗಿದ ನಂತರ ಪಾಕಿಸ್ತಾನದ ಅಧ್ಯಕ್ಷ ಭುಟ್ಟೊ ಮತ್ತು ಶ್ರೀಮತಿ ಗಾಂಧಿ ಅವರ ನಡುವಣ ಯೋಜಿತ ಶೃಂಗಸಭೆ ನಡೆಯಬಹುದೆಂದು ಸರ್ಕಾರ ಇಂದು ವಿರೋಧ ಪಕ್ಷಗಳ ನಾಯಕರಿಗೆ ತಿಳಿಸಿತು.

‍ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಬರ ಮಾಡಿಕೊಂಡು ಮರ‍್ರಿ ಮತ್ತು ಇಸ್ಲಾಮಾಬಾದ್‌ಗಳಲ್ಲಿ ನಡೆದ ಭಾರತ–ಪಾಕಿಸ್ತಾನ ಪ್ರತಿನಿಧಿಗಳ ಮಟ್ಟದ ಮಾತುಕತೆ ಬಗ್ಗೆ ವರದಿ ನೀಡಿದರು.

ಅತಿಕ್ರಮಿಸುವ ಪಾಕ್ ವಿಮಾನಕ್ಕೆ ಗುಂಡು: ಪಡೆಗಳಿಗೆ ಕಟ್ಟಾಜ್ಞೆ

ನವದೆಹಲಿ, ಮೇ 19– ಭಾರತದ ವಾಯು ಸೀಮೋಲ್ಲಂಘನೆ ಮಾಡುವ ಪಾಕಿಸ್ತಾನದ ಯಾವುದೇ ವಿಮಾನವನ್ನು ಗುಂಡಿಕ್ಕಿ ಕೆಡವಲು ಗಡಿ ಭದ್ರತಾ ಪಡೆಗಳಿಗೆ ಆಜ್ಞೆ ಮಾಡಲಾಗಿದೆ ಎಂದು ರಕ್ಷಣಾ ಉತ್ಪಾದನೆಯ ರಾಜ್ಯ ಸಚಿವ ವಿ.ಸಿ.ಶುಕ್ಲ ಅವರು ಇಂದು ಲೋಕಸಭೆಗೆ ತಿಳಿಸಿದರು.

ಭಾರತದ ವಾಯು ಪ್ರದೇಶದೊಳಕ್ಕೆ ನುಸುಳಿ ಬರುವ ವಿಮಾನಗಳ ಬಗ್ಗೆ ಯಾವ ರೀತಿ ವ್ಯವಹರಿಸಬೇಕೆಂಬುದು ಅಲ್ಲಿನ ಪಡೆ ಗಳಿಗೆ ಬಿಟ್ಟದ್ದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT