ಗೋಪಿಚಂದ್ಗೆ ಬ್ಯಾಡ್ಮಿಂಟನ್ ಕಿರೀಟ

ಬರ್ಮಿಂಗ್ಯಾಮ್, ಮಾರ್ಚ್ 11– ಭಾರತದ ಪುಲ್ಲೇಲ ಗೋಪಿಚಂದ್ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಎರಡು ದಶಕಗಳ ಹಿಂದೆ ಬೆಂಗಳೂರಿನ ಪ್ರಕಾಶ್ ಪಡುಕೋಣೆಯವರು ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನಿಸಿದ್ದರು. ಆ ನಂತರ ಈಗ ಪ್ರಕಾಶ್ ಮಾರ್ಗದರ್ಶನದಲ್ಲಿಯೇ ಅರಳಿದ ಗೋಪಿಚಂದ್ ಈ ಪ್ರಶಸ್ತಿಯನ್ನು ಭಾರತಕ್ಕೆ ಮರಳಿ ತಂದಿದ್ದಾರೆ.

ಪ್ರಿಕ್ವಾರ್ಟರ್ ಫೈನಲ್ನಲ್ಲಿ ಒಲಿಂಪಿಕ್ ಚಾಂಪಿಯನ್ ಕ್ಸೆನ್ಸಿಂಗ್ ಮತ್ತು ಸೆಮಿಫೈನಲ್ನಲ್ಲಿ ವಿಶ್ವ ಅಗ್ರಕ್ರಮಾಂಕದ ಪೀಟರ್ ಗಾಡೆಯವರನ್ನು ಸೋಲಿಸಿದ್ದ ಗೋಪಿಚಂದ್ ಅವರು, ಇಂದು ಫೈನಲ್ನಲ್ಲಿ ಚೀನಾದ ಚೆನ್ಹಾಂಗ್ ಅವರನ್ನು 15–12, 15–6ರಿಂದ ಮಣಿಸಿದರು.

ಹರಭಜನ್ ಹ್ಯಾಟ್ರಿಕ್

ಕೋಲ್ಕತ್ತ, ಮಾರ್ಚ್ 11– ಭಾರತದ ಯುವ ಆಫ್ಸ್ಪಿನ್ ಬೌಲರ್ ಹರಭಜನ್ ಸಿಂಗ್ ಅವರು, ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಭಾರತೀಯ ಎನ್ನುವ ಗೌರವ ಸಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.