ಸಾಂಗ್ಲಿ, ಮಾರ್ಚ್ 16– ಹೆಂಗಸರ ಮುಂದೆ ಗಂಡಸರು ಮೀಸೆಯನ್ನು ತಿರುವುವುದು ಅಸಭ್ಯ ವರ್ತನೆ ಎಂದು ಸಾಂಗ್ಲಿ ಪುರಸಭೆಯ ಮಹಿಳಾ ಸದಸ್ಯರೊಬ್ಬರ ಅಭಿಪ್ರಾಯ.

ಪುರಸಭೆಯಲ್ಲಿ ಒಂದು ಜೊತೆ ಎತ್ತುಗಳನ್ನು ಕೊಂಡ ಬಗ್ಗೆ ಇತ್ತೀಚೆಗೆ ಬಿಸಿಬಿಸಿ ಚರ್ಚೆಯಾಗುತ್ತಿದ್ದಾಗ, ಒಂದು ಪಕ್ಷದ ಸದಸ್ಯರೊಬ್ಬರು ಮೀಸೆಯನ್ನು ಹುರಿ ಮಾಡಿ ತಮ್ಮ ವಾದಕ್ಕೆ ಹುರುಪುಕೊಟ್ಟರು.

‘ಹೆಂಗಸರ ಮುಂದೆ ಸದಸ್ಯರು ಈ ರೀತಿಯ ಸವಾಲಿನ ಕಸರತ್ನ’ ಪ್ರದರ್ಶನಕ್ಕೆ ಅವಕಾಶ ಕೊಡಕೂಡದೆಂದು ಮಹಿಳಾ ಸದಸ್ಯರೊಬ್ಬರು ಅಧ್ಯಕ್ಷರನ್ನು ಕೋರಿದರು.

ಸದಸ್ಯೆಯ ಪ್ರಾರ್ಥನೆಯನ್ನು ಮನ್ನಿಸಿ, ಕಸರತ್ ಪ್ರದರ್ಶಕ ಸದಸ್ಯರು ತಮ್ಮ ಆಟಾಟೋಪವನ್ನು ಕೈಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.