7 ಮಂದಿ ಕಾಂಗ್ರೆಸ್ಸಿಗರ ಭೀಕರ ಕೊಲೆ

ಗುಂಟೂರು, ಮಾರ್ಚ್ 10 (ಯುಎನ್ಐ)– ಆಂಧ್ರಪ್ರದೇಶದಲ್ಲಿ ಈಚಿನ ದಿನಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ರಾಜಕೀಯ ಹಿಂಸಾಚಾರವೊಂದರಲ್ಲಿ ಶಂಕಿತ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತರು ಇಂದು ಗುಂಟೂರು ಜಿಲ್ಲೆಯ ದುರ್ಗಿ ಪೊಲೀಸ್ ಠಾಣೆ ಸಮೀಪ ಏಳು ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆಯಲ್ಲಿ ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಬ್ಬರು ಮಾತ್ರ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಕಂಬಾಲಪಲ್ಲಿ ದುರ್ಘಟನೆಗೆ ಒಂದು ವರ್ಷ

ಕೋಲಾರ, ಮಾರ್ಚ್ 10– ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿಯಲ್ಲಿ ದಲಿತರ ದ್ವೇಷಕ್ಕೆ ಒಬ್ಬ ವ್ಯಕ್ತಿ ಬಲಿಯಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಸವರ್ಣೀಯರ ಆಕ್ರೋಶಕ್ಕೆ ಏಳು ಜನ ದಲಿತರು ಸಜೀವದಹಿಸಿ ಸುಟ್ಟುಹೋದ ಪ್ರಕರಣದ ನಡೆದು ಇಂದಿಗೆ ವರ್ಷ ತುಂಬಿದೆ.

ಕಳೆದ 2000ರ ಮಾರ್ಚ್ 11ರಂದು ಸಂಭವಿಸಿದ ಈ ಅಮಾನವೀಯ ಘಟನೆಯಿಂದಾಗಿ ಇಡೀ ರಾಷ್ಟ್ರವೇ ತಲೆತಗ್ಗಿಸುವಂತಾಗಿ ರಾಷ್ಟ್ರದ ಇತಿಹಾಸದಲ್ಲಿ ಇದೊಂದು ಕರಾಳ ಛಾಯೆ ಮೂಡಿಸಿತ್ತು.

ದಲಿತರ ಮಾರಣಹೋಮ ನಡೆದುಹೋದ ಹಿನ್ನೆಲೆಯಲ್ಲಿ ಇಡೀ ವಿಶ್ವದ ಗಮನವನ್ನು ಕಂಬಾಲಪಲ್ಲಿ ಸೆಳೆದಿತ್ತು. ಅಲ್ಲಿ ನೆಲೆಸಿದ್ದ ಸ್ಮಶಾನ ಮೌನದ ಕಾರ್ಮೋಡಗಳು ನಿಧಾನವಾಗಿ ಸರಿಯುತ್ತಲಿವೆಯಾದರೂ ಊರಿನ ಈಶಾನ್ಯ ದಿಕ್ಕಿನಲ್ಲಿ ತಲೆತಲೆಮಾರುಗಳಿಂದ ವಾಸ್ತವ್ಯ ಹೂಡಿದ್ದ ದಲಿತರು ಮನೆಗಳನ್ನು ಖಾಲಿ ಮಾಡಿಕೊಂಡು ಚಿಂತಾಮಣಿಗೆ ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.