ಬೆಂಗಳೂರು: ಏ. 28–ಮುಂದಿನ ಹಣಕಾಸು ವರ್ಷದ ಪ್ರಾರಂಭ ದಿಂದಲೇ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಂ. ಶಿವಣ್ಣ ಇಂದು ಇಲ್ಲಿ ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ವರದಿಗಾರರ ಜತೆಗೆ ಮಾತನಾಡಿದ ಅವರು, ಈ ಕುರಿತು ಎಲ್ಲಾ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಸೀಂದಾಸ್ ಗುಪ್ತ ಅವರ ಅಧ್ಯಕ್ಷತೆ
ಯಲ್ಲಿ ಈಚೆಗೆ ದೆಹಲಿಯಲ್ಲಿ ಒಂದು ಸಭೆ ನಡೆಯಿತು. ಆ ಸಭೆಯಲ್ಲಿ ತಾವೂ ಭಾಗವಹಿಸಿದ್ದಾಗಿ ತಿಳಿಸಿದ ಸಚಿವರು, ಅಲ್ಲಿ ಸುದೀರ್ಘ ಚರ್ಚೆ ನಡೆಯಿತು ಎಂದರು.

ವಿಷಪೂರಿತ ಆಹಾರ ಸೇವಿಸಿ ಐವರ ಸಾವು

ಬೆಂಗಳೂರು: ಏ. 28– ಕಾಡುಸೀಗೆ ಸೊಪ್ಪಿನ ಸಾರು ಮತ್ತು ರಾಗಿಮುದ್ದೆ ಉಂಡ ಒಂದೇ ಮನೆಯ ಮೂವರು ಮಕ್ಕಳು, ವೃದ್ಧೆ ಸೇರಿದಂತೆ ಐವರು ಶುಕ್ರವಾರ ಮಧ್ಯಾಹ್ನ ಕನಕಪುರ ತಾಲ್ಲೂಕಿನ ರಾಮದೇವರ ದೊಡ್ಡಿ ಯಲ್ಲಿ ಮೃತಪಟ್ಟಿದ್ದಾರೆ.

ಕೂಲಿ ಕೆಲಸ ಮಾಡುವ ಗೋಪಾಲ ಎಂಬುವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಗೋಪಾಲ ಅವರು ಮೇಕೆ ಖರೀದಿ ಮಾಡಲು ಮರಳವಾಡಿ ಸಂತೆಗೆ ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.