ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ. ಆ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ಅನಿಶ್ಚಿತತೆ, ಚರ್ಚೆಗಳು ಮತ್ತು ರಾಜಕೀಯ ಅಧಿಕಾರಕ್ಕಾಗಿ ನಡೆದ ಹೋರಾಟಕ್ಕೆ ಕಾಂಗ್ರೆಸ್ ತೆರೆ ಎಳೆದಿದೆ. ಸತೀಶನ್ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಿದ್ದಂತೆಯೇ ಕೇರಳದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.

1964ರ ಮೇ 31ರಂದು ಕೊಚ್ಚಿಯ ನೆಟ್ಟೂರ್ನಲ್ಲಿ ಕೆ. ದಾಮೋದರ ಮೆನನ್ ಮತ್ತು ವಿ. ವಿಲಾಸಿನಿ ಅಮ್ಮ ದಂಪತಿಗಳಿಗೆ ಜನಿಸಿದ ಸತೀಶನ್ ವಿದ್ಯಾರ್ಥಿ ನಾಯಕನಾಗಿ ಬೆಳೆದು ಬಂದು ಇದೀಗ ಮುಖ್ಯಮಂತ್ರಿಯಾಗುತ್ತಿದ್ದಾರೆ. ಪರವೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು 6 ಬಾರಿ ಶಾಸಕರಾಗಿದ್ದಾರೆ.

ಆರಂಭಿಕ ಜೀವನ

ಪ್ರಾಥಮಿಕ ಶಿಕ್ಷಣ: ಪನಂಗಾಡ್ ಪ್ರೌಢಶಾಲೆ.

ಪದವಿ ಶಿಕ್ಷಣ: ಸೇಕ್ರೆಡ್ ಹಾರ್ಟ್ ಕಾಲೇಜು, ತೇವರ.

ಸ್ನಾತಕೋತ್ತರ ಪದವಿ: ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್ನಿಂದ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (ಎಂಎಸ್ ಡಬ್ಲ್ಯೂ).

ಕಾನೂನು ಪದವಿಗಳು: ಕೇರಳ ಲಾ ಅಕಾಡೆಮಿಯಿಂದ ಎಲ್ಎಲ್ ಬಿ ಮತ್ತು ತಿರುವನಂತಪುರದ ಸರ್ಕಾರಿ ಲಾ ಕಾಲೇಜಿನಿಂದ ಎಲ್ಎಲ್ ಎಂ.

ಪೂರ್ಣಕಾಲಿಕ ರಾಜಕಾರಣಕ್ಕೆ ಪ್ರವೇಶಿಸುವ ಮೊದಲು, ಸತೀಶನ್ ಅವರು ಸುಮಾರು ಒಂದು ದಶಕ ಕೇರಳ ಹೈಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ನಿರ್ವಹಿಸಿದ್ದರು.

ವಿದ್ಯಾರ್ಥಿ ರಾಜಕಾರಣ

ಸತೀಶನ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ನಾಯಕನಾಗಿದ್ದರು. ಕೇರಳ ವಿದ್ಯಾರ್ಥಿ ಒಕ್ಕೂಟವನ್ನು (ಕೆಎಸ್ಯು) ಪ್ರತಿನಿಧಿಸುತ್ತಿದ್ದ ಅವರು, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಯೂನಿಯನ್ ಅಧ್ಯಕ್ಷರಾಗಿ (1986–1987) ಆಯ್ಕೆಯಾಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್ಯು) ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಶಾಸಕರಾಗಿ ವಿ.ಡಿ

1996ರಲ್ಲಿ ಪರವೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಸೋಲುಂಡರು. 2001ರಲ್ಲಿ ಗೆಲುವು ಸಾಧಿಸಿದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಅಂನಿದಿಂದ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದಾರೆ. 12ನೇ ವಿಧಾನಸಭೆಯ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದಾರೆ. 2021–26ರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.

2026ರಲ್ಲಿ ಯುಡಿಎಫ್ ಬಹುಮತ ಪಡೆಯುವಲ್ಲಿ ಸತೀಶನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. 140 ಸ್ಥಾನಗಳಲ್ಲಿ ಯುಡಿಎಫ್ 102 ಸ್ಥಾನಗಳನ್ನು ಗೆದ್ದುಕೊಂಡಿದೆ.

ಸಂಸದೀಯ ಕೌಶಲ್ಯ

ಉತ್ತಮ ವಾಗ್ಮಿಯಾಗಿರುವ ಸತೀಶನ್, ವಿಧಾನಸಭೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವನ್ನು ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ನೇರ ನುಡಿ ಮೂಲಕವೂ ಹೆಸರು ಪಡೆದಿದ್ದಾರೆ. ನವ ತಲೆಮಾರಿನ ಯುವಕರಿಗೆ ವಿ.ಡಿ. ಬಗ್ಗೆ ವಿಶೇಷ ಒಲವಿದೆ. ಮುಖ್ಯಮಂತ್ರಿ ಕುರ್ಚಿಗೆ ನಡೆಯುತ್ತಿದ್ದ ಹಗ್ಗಜಗ್ಗಾಟದ ಸಂದರ್ಭದಲ್ಲಿ ಯುವಕರು ಸತೀಶನ್ ಬೆನ್ನಿಗೆ ನಿಂತಿದ್ದರು.

ಸತೀಶನ್ ಆರ್. ಲಕ್ಷ್ಮಿ ಪ್ರಿಯಾ ಅವರನ್ನು ವಿವಾಹವಾಗಿದ್ದು, ಉನ್ನಿಮಾಯಾ ಎಂಬ ಒಬ್ಬ ಪುತ್ರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.