ಕೇರಳಂನಲ್ಲಿ ಹೊಸ ರಾಜಕೀಯ ಪರಿಭಾಷೆ ಬರೆದವರು ಸತೀಶನ್. 2026ರ ವಿಧಾನಸಭಾ ಚುನಾವಣೆಯ ಭಾಗವಾಗಿ ಅವರ ನೇತೃತ್ವದಲ್ಲಿ ನಡೆದ 30 ದಿನಗಳ ‘ಯುಡಿಎಫ್ ಪುದು ಯುಗ’ ಯಾತ್ರೆಯು ಕೇರಳಂ ಮುಖ್ಯಮಂತ್ರಿ ಕುರ್ಚಿಯೆಡೆಗಿನ ಅವರ ಹಾದಿಯನ್ನು ಸುಗಮಗೊಳಿಸಿತು. ಕೆಪಿಸಿಸಿ ಉಪಾಧ್ಯಕ್ಷ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಸತೀಶನ್ ಹೊಂದಿದ್ದಾರೆ. ಹಿಂದೆಂದೂ ಸಚಿವರಾಗಿ ಅನುಭವ ಇಲ್ಲದ ಸತೀಶನ್, ಈಗ ಮುಖ್ಯಮಂತ್ರಿ ಕುರ್ಚಿ ಏರಿದ್ದಾರೆ. ಯುವ ಸಮುದಾಯದ ಪಾಲಿಗೆ ಸತೀಶನ್ ಕೇರಳಂನ ‘ಪುದು ಯುಗ’ದ (ಹೊಸ ಯುಗ) ‘ಪೂಕಿ (ಮುದ್ದಿನ) ಮುಖ್ಯಮಂತ್ರಿ’ ಆಗಿದ್ದಾರೆ