ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಡಬ್ಬಿಂಗ್: ಕನ್ನಡ ಪರ

Last Updated 1 ಆಗಸ್ಟ್ 2019, 19:41 IST
ಅಕ್ಷರ ಗಾತ್ರ

ಡಬ್ಬಿಂಗ್, ಅಪ್ಪಟ ಕನ್ನಡ ಪರವಾದ ವಿಚಾರ. ತೆಲುಗು, ತಮಿಳು, ಹಿಂದಿ ಮೊದಲಾದ ಭಾಷೆಗಳ ಚಿತ್ರಗಳು ಕರ್ನಾಟಕದಲ್ಲಿ ಆಯಾ ಭಾಷೆಯಲ್ಲಿಯೇ ಬಿಡುಗಡೆ ಆಗುವುದರ ಬದಲಿಗೆ, ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಬೇಕಿದೆ.

ನೂರಾರು ಚಿತ್ರಮಂದಿರಗಳಲ್ಲಿ ಬೇರೆ ಬೇರೆ ಭಾಷೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕನ್ನಡ ಭಾಷೆಗೆ ಎದುರಾಗಿರುವ ದೊಡ್ಡ ಆತಂಕ.

ಕನ್ನಡ ಭಾಷೆಯ ಉಳಿವಿನ ನಿಟ್ಟಿನಲ್ಲಿ ಡಬ್ಬಿಂಗ್ ಪರಿಣಾಮಕಾರಿಯಾಗಿದೆ. ಆದರೂ ಸಣ್ಣಪುಟ್ಟ ಕೀಟಲೆಗಳನ್ನು ತೆಗೆದು, ಡಬ್ಬಿಂಗ್ ಚಿತ್ರಗಳು ಸೋಲುವಂತೆ ಮಾಡುವುದು ಪಟ್ಟಭದ್ರ ಹಿತಾಸಕ್ತಿಗಳ ಕೆಲಸವಾಗಿದೆ. ಪ್ರಪಂಚದ ಜ್ಞಾನ ಹಾಗೂ ಮನರಂಜನೆಯನ್ನು ನಮ್ಮ ಭಾಷೆಯಲ್ಲಿಯೇ ಪಡೆದುಕೊಳ್ಳುವುದು ನಮ್ಮ ಹಕ್ಕು. ಅದನ್ನು ಉಳಿಸಿಕೊಂಡು ಕನ್ನಡವನ್ನು ಗಟ್ಟಿಗೊಳಿಸಬೇಕಿದೆ.
-ಗಿರೀಶ್ ಮತ್ತೇರ, ಹೊದಿಗೆರೆ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT