ಬುಧವಾರ, ಆಗಸ್ಟ್ 21, 2019
22 °C

ಜಯಂತಿ ಸಲುವಾಗಿ ಕಾಲಹರಣ ಸಲ್ಲ

Published:
Updated:

ರಾಜ್ಯ ಸರ್ಕಾರವು ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ಸ್ವಾಗತಾರ್ಹ. ಆದರೆ ಗಾಂಧೀಜಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಗಳನ್ನು ಸರ್ಕಾರವೇ ಆಚರಿಸಲಿ.

ಈ ಇಬ್ಬರೂ ದೇಶದ ಎರಡು ಕಣ್ಣುಗಳಿದ್ದಂತೆ. ಸರ್ಕಾರದ ವತಿಯಿಂದ ಇವರ ಜಯಂತಿ ಆಚರಿಸುವುದಕ್ಕೆ ಯಾವ ಸಮುದಾಯದ ವಿರೋಧವೂ ಇರಲಾರದು. ನಮ್ಮ ಸರ್ಕಾರಗಳು ಅಭಿವೃದ್ಧಿ ಕಡೆ ಗಮನ ಕೊಡಬೇಕು. ಅದುಬಿಟ್ಟು, ಅಭಿವೃದ್ಧಿಗೆ ಪೂರಕವಲ್ಲದ ಜಯಂತಿ ಆಚರಣೆಗಳಲ್ಲಿ ಕಾಲಹರಣ ಮಾಡುವುದು ಸರಿಯಲ್ಲ.
-ಭೀಮಾಶಂಕರ ಹಳಿಸಗರ, ಶಹಾಪುರ

 

Post Comments (+)