ಗುರುವಾರ , ನವೆಂಬರ್ 14, 2019
22 °C
1994

ಮಂಗಳವಾರ, 13–9–1994

Published:
Updated:

ಬಂದ್ ಕರೆ ಕೈಬಿಡಲು ಪ್ರಧಾನಿ ಸಲಹೆ– ಮುಲಾಯಂ ತಿರಸ್ಕಾರ
ನವದೆಹಲಿ, ಸೆ. 12 (ಯುಎನ್‌ಐ, ಪಿಟಿಐ)– ಆಡಳಿತಾರೂಢ ಸಮಾಜವಾದಿ ಪಕ್ಷ– ಬಹುಜನ ಸಮಾಜ ಪಕ್ಷಗಳು ನಾಳೆ ಉತ್ತರ ಪ್ರದೇಶ ಬಂದ್‌ಗೆ ನೀಡಿರುವ ಕರೆಯನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ನೀಡಿದ ಸಲಹೆಯನ್ನು ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್‌ ಇಂದು ತಿರಸ್ಕರಿಸಿರುವ ಪರಿಣಾಮವಾಗಿ 10 ತಿಂಗಳುಗಳ ಯಾದವ್‌ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ.

‌ಗುರುತು ಚೀಟಿ ನೀಡಿಕೆ ಸದ್ಯಕ್ಕೆ ಅಸಾಧ್ಯ
ನವದೆಹಲಿ, ಸೆ. 12 (ಪಿಟಿಐ)– ಕೆಲವೊಂದು ‘ವ್ಯಾವಹಾರಿಕ ತೊಂದರೆಗಳ’ ಕಾರಣ ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳೆಗೆ (ಡಿಸೆಂಬರ್ 31) ಮತದಾರರಿಗೆ ಭಾವಚಿತ್ರ ಸಹಿತ ಗುರುತು ಚೀಟಿ ನೀಡುವಿಕೆಯನ್ನು ಪೂರ್ತಿಗೊಳಿಸಲು ಸಾಧ್ಯವಾಗದು ಎಂದು ಇಂದು ಇಲ್ಲಿ ಸಭೆ ಸೇರಿದ್ದ 10 ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದರು.

ಮತದಾರರಿಗೆ ಭಾವಚಿತ್ರ ಸಹಿತ ಗುರುತಿನ ಚೀಟಿ ನೀಡುವುದನ್ನು ರಾಜ್ಯಗಳು ತಾತ್ವಿಕವಾಗಿ ಒಪ್ಪಿವೆ. ಆದರೆ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಅಕಾಡೆಮಿ ಪ್ರಕಟಣೆ
ನವದೆಹಲಿ, ಸೆ. 12 – ನೂರು ಪ್ರಾಚೀನ ಕಾವ್ಯಗಳ ಅನುವಾದಗಳನ್ನು ಪ್ರಕಟಿಸಲು ಸಾಹಿತ್ಯ ಅಕಾಡೆಮಿ ಯೋಜನೆ ಹಾಕಿದೆ. ಈ ಸರಣಿಯಲ್ಲಿ ಮೊದಲಿಗೆ ತೆಲುಗು ಸಂತಕವಿ ವೇಮನನ ಇಂಗ್ಲಿಷ್ ಅನುವಾದ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

 

ಪ್ರತಿಕ್ರಿಯಿಸಿ (+)