‘ಶಿಕ್ಷಣ ತೆರಿಗೆ’ಗೆ ಮುಖ್ಯಮಂತ್ರಿ ಒಪ್ಪಿಗೆ

ಶುಕ್ರವಾರ, ಮೇ 24, 2019
23 °C

‘ಶಿಕ್ಷಣ ತೆರಿಗೆ’ಗೆ ಮುಖ್ಯಮಂತ್ರಿ ಒಪ್ಪಿಗೆ

Published:
Updated:

‘ಶಿಕ್ಷಣ ತೆರಿಗೆ’ಗೆ ಮುಖ್ಯಮಂತ್ರಿ ಒಪ್ಪಿಗೆ

ನವದೆಹಲಿ, ಫೆ. 15 (ಯುಎನ್‌ಐ)– ಸಂಪನ್ಮೂಲ ಸಂಗ್ರಹಣೆಗಾಗಿ ಶಿಕ್ಷಣ ತೆರಿಗೆ ಹೇರುವ ಬಗ್ಗೆ ಇಂದು ಇಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ಮುಖ್ಯಮಂತ್ರಿಗಳ ಸಭೆ ಒಟ್ಟಾರೆಯಾಗಿ ಒಪ್ಪಿಕೊಂಡಿದೆ. ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೆ ನೀಡುವ ದೇಣಿಗೆಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡುವಂತೆಯೂ ಅದು ಸಲಹೆ ಮಾಡಿದೆ.

ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳ ಚರ್ಚೆಗಾಗಿಯೇ ಪ್ರಧಾನಿ ಪಿ.ವಿ. ನರಸಿಂಹರಾವ್ ಕರೆದಿದ್ದ ಒಂದು ದಿನದ ಈ ಸಭೆ ರಾಷ್ಟ್ರೀಯ ಆದ್ಯತಾ ಪಟ್ಟಿಯಲ್ಲಿ ಶಿಕ್ಷಣಕ್ಕೆ ಮೊದಲ ಸ್ಥಾನ ನೀಡಲು ಒಪ್ಪಿತು.

ಎಳೆಯರಿಗೆ ಬಾರ್ ಪ್ರವೇಶ ನಿಷಿದ್ಧ

ಬೆಂಗಳೂರು, ಫೆ. 15– ರಾಜ್ಯದಲ್ಲಿರುವ ಮದ್ಯದಂಗಡಿಗಳನ್ನು ಮತ್ತು ಬಾರ್‌ಗಳನ್ನು ರಾತ್ರಿ 7.30ರ ಹೊತ್ತಿಗೆ ಮುಚ್ಚಿಸುವುದರ ಬಗ್ಗೆ ಸರ್ಕಾರ ಯಾವ ನಿರ್ಣಯವನ್ನೂ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಇಂದು ಸ್ಪಷ್ಟಪಡಿಸಿದರು.

ಇಪ್ಪತ್ತೊಂದು ವರ್ಷದ ಒಳಗಿನ ಯುವಕರಿಗೆ ಬಾರ್ ಮತ್ತು ಮದ್ಯದಂಗಡಿಗಳಿಗೆ ಪ್ರವೇಶ ನಿಷಿದ್ಧ. ಈ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಮೊಯಿಲಿ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !