ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್ ಪ್ರಕರಣ ಸಂವಿಧಾನ ಪೀಠಕ್ಕೆ

Last Updated 12 ಆಗಸ್ಟ್ 2019, 18:00 IST
ಅಕ್ಷರ ಗಾತ್ರ

ಸಂಜಯ್ ಪ್ರಕರಣ ಸಂವಿಧಾನ ಪೀಠಕ್ಕೆ

ನವದೆಹಲಿ, ಆ. 12 (ಪಿಟಿಐ)– ಟಾಡಾ ಕಾಯ್ದೆಯನ್ವಯ ಬಂಧನಕ್ಕೊಳಗಾಗಿರುವ ಚಿತ್ರನಟ ಸಂಜಯ್ ದತ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿತು. ಆದರೆ ಈ ಪ್ರಕರಣ ಹೆಚ್ಚು ವ್ಯಾಪ್ತಿಯ ಅಂಶಗಳನ್ನು ಒಳಗೊಂಡಿ ರುವುದರಿಂದ ಸಂವಿಧಾನ ಪೀಠಕ್ಕೆ ಒಪ್ಪಿಸು ವುದಾಗಿ ಅದು ಹೇಳಿತು.

ಟಾಡಾ ಕಾಯ್ದೆಯ ನಿಯಮಗಳ ಬಗ್ಗೆ ಸ್ಪಷ್ಟ ಅರ್ಥವ್ಯಾಪ್ತಿ ಇರದಿರುವ ಕಾರಣ ಈ ಹಂತದಲ್ಲಿ ಸಂಜಯ್ ದತ್ ಅವರನ್ನು ಬಿಡು ಗಡೆ ಮಾಡಿದಲ್ಲಿ, ಇದೇ ಕಾಯ್ದೆ ಪ್ರಕಾರ ಬಂಧನಕ್ಕೊಳಗಾಗಿರುವ ಇತರ ಕೈದಿಗಳ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಹೇಮಾವತಿ ನಾಲಾ ಕೆಲಸ ಸ್ಥಗಿತಕ್ಕೆ ಆದೇಶ

ತುಮಕೂರು, ಆ. 12– ತುಮಕೂರಿಗೆ ಕುಡಿಯುವ ನೀರು ತರುವ ಹೇಮಾವತಿ ನಾಲಾ ಕೆಲಸವನ್ನು ಮುಂದಿನ ಆದೇಶ ಬರುವವರೆಗೆ ನಿಲ್ಲಿಸಬೇಕೆಂದು ಉಪಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆದೇಶ ನೀಡಿರುವುದರಿಂದ ಗುಬ್ಬಿ ತಾಲ್ಲೂಕಿನಲ್ಲಿ ಹೇಮಾವತಿ ಕೆಲಸ ಇಂದಿನಿಂದ ಸ್ಥಗಿತಗೊಂಡಿದೆ.

ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಸೆಪ್ಟೆಂಬರ್ ಅಂತ್ಯಕ್ಕೆ ಹೇಮಾವತಿ ನೀರು ಹರಿಯುವ ಭರವಸೆ ನೀಡಿದ್ದರು.
ಈಗ ನಾಲೆ ಕೆಲಸ ಸ್ಥಗಿತದ ಆದೇಶದಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನಡುವಣ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಯಲಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT