ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯೆಯ ಒಡಲಿಗೇ ಕನ್ನ

Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪಿಎಚ್‌ಡಿಗಾಗಿ ಸಂಶೋಧನಾರ್ಥಿಗಳನ್ನು ಆಯ್ಕೆ ಮಾಡಲು ನಡೆದ ಪರೀಕ್ಷೆಗೆ ಹಾಜರಾದ 2,144 ಮಂದಿ ಸ್ನಾತಕೋತ್ತರ ಪದವೀಧರರಲ್ಲಿ 346 ಮಂದಿ ಮಾತ್ರ ಉತ್ತೀರ್ಣರಾದ ವಿಷಯ ವರದಿಯಾಗಿದೆ.

ಪದವಿ ಹಾಗೂ ಸ್ನಾತಕೋತ್ತರದ ಪಠ್ಯವನ್ನೇ ಆಧರಿಸಿರುವ ಈ ಪರೀಕ್ಷೆಯಲ್ಲಿ ಶೇ 83 ಮಂದಿ ಅನುತ್ತೀರ್ಣರೆಂದಾದರೆ, ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳ ಕಲಿಕಾ ಮಟ್ಟ ಎಂತಹ ಸ್ಥಿತಿಯನ್ನು ತಲುಪಿದೆ ಎಂದು ಊಹಿಸಬಹುದು. ಸಾಕಷ್ಟು ಮಂದಿ ಒಂದೇ ಅಂಕಿಯ ಅಂಕ ಪಡೆದಿದ್ದಾರೆ ಎಂಬುದು ಶಿಕ್ಷಣ ತಜ್ಞರ ಚಿಂತೆಗೆ ಕಾರಣವಾಗಿದೆ.

ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಬೋಧನೆಯು ಗೌರವಯುತ ಮತ್ತು ಬಿಳಿಕಾಲರ್‌ ನೌಕರಿಗೆ ರಹದಾರಿ ಎಂದು ಪರಿಗಣಿಸಲಾಗುತ್ತದೆ. ‘ಕಡಿಮೆ ಕೆಲಸ; ಹೆಚ್ಚಿನ ಪಗಾರ’ ಎಂಬ ಮಾತು ಯುಜಿಸಿ ವೇತನಶ್ರೇಣಿ ಜಾರಿಯಾದಾಗಿನಿಂದ ಚಾಲ್ತಿಗೆ ಬಂದಿದೆ. ನಕಲಿ ಎಂ.ಫಿಲ್, ಪಿಎಚ್‌ಡಿ ಪ್ರಮಾಣಪತ್ರ ಹೊಂದಿದ ಸಾವಿರಾರು ಮಂದಿ ಇಂದು ಉಪನ್ಯಾಸಕರಾಗಿ ನೇಮಕಗೊಂಡಿರುವುದು, ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿರುವುದು ದೇಶದ ದುರಂತಗಳಲ್ಲಿ ಒಂದು. ಶಾರದೆಯ ಒಡಲಿಗೇ ಕನ್ನ ಹಾಕಿದ ಇಂತಹ ಪ್ರಾಧ್ಯಾಪಕರು ಎಷ್ಟರಮಟ್ಟಿಗೆ ಬೋಧಿಸಬಹುದು?

ಟಿ.ಎನ್. ಸರಸ್ವತಿ, ತುರುವೇಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT