7

ಶುಕ್ರವಾರ, 21–6–1968

Published:
Updated:

ಛಿದ್ರಕಾರಕ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಇಂದಿರಾ ಕರೆ

ಶ್ರೀನಗರ, ಜೂನ್ 20–ನಮ್ಮರಾಷ್ಟ್ರ ಉಳಿಯಬೇಕಾದರೆ ಒಗ್ಗಟ್ಟು ಅತ್ಯಗತ್ಯ ಎಂದು ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

ಪುನರ್‌ರಚಿತ ರಾಷ್ಟ್ರ ಸಮಗ್ರತೆ ಮಂಡಳಿಯ ಎರಡು ದಿನಗಳಸಮ್ಮೇಳನವನ್ನು ಉದ್ಘಾಟಿಸುತ್ತಾ ಅವರು ರಾಷ್ಟ್ರ ಒಡೆಯಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಬಹುಮುಖ ಹೋರಾಟಕ್ಕೆ ಕರೆಯಿತ್ತರು.

ಮಹತ್ವದ ಸಮ್ಮೇಳನ: ಸಾದಿಕ್ ಸ್ವಾಗತ

ಶ್ರೀನಗರ, ಜೂನ್‌ 20– ನಮ್ಮ ಇತಿಹಾಸದ ಮಹತ್ವ ಸಮಯದಲ್ಲಿ ನಡೆಯುತ್ತಿರುವ ರಾಷ್ಟ್ರ ಸಮಗ್ರತೆ ಮಂಡಳಿಯ ಸಮ್ಮೇಳನಕ್ಕೆ ವಿಶೇಷ ಮಹತ್ವವಿದೆಯೆಂದು ಹೇಳಿ ಕಾಶ್ಮೀರದ ಮುಖ್ಯಮಂತ್ರಿ ಜಿ.ಎಂ. ಸಾದಿಕ್ ಅವರು ಸ್ವಾಗತಿಸಿದರು.

ಅಣ್ವಸ್ತ್ರರಹಿತರಿಗೆ ರಕ್ಷಣೆ: ಭದ್ರತಾ ಸಮಿತಿಯಲ್ಲಿ  ನಿರ್ಣಯ ಅಂಗೀಕೃತ

ವಿಶ್ವರಾಷ್ಟ್ರಸಂಸ್ಥೆ, ಜೂನ್‌ 20– ಅಣ್ವಸ್ತ್ರ ದಾಳಿಯ ಬೆದರಿಕೆಗೆ ಒಳಗಾದ ಅಣ್ವಸ್ತ್ರರಹಿತ ರಾಷ್ಟ್ರಕ್ಕೆ ತತ್‌ಕ್ಷಣ ನೆರವು ನೀಡಲು ಶಕ್ತರಾಷ್ಟ್ರಗಳ ಭರವಸೆ ಇತ್ತಿರುವ ನಿರ್ಣಯಕ್ಕೆ ಭದ್ರತಾ ಸಮಿತಿ ನಿನ್ನೆ ಒಪ್ಪಿಗೆ ಇತ್ತಿತು.

ದಾಳಿಯ ಪ್ರಸಂಗವೊದಗಿದರೆ ವಿಶ್ವರಾಷ್ಟ್ರ ಸಂಸ್ಥೆಯ ಪ್ರಣಾಳಿಕೆಯ ಹೊಣೆಗಾರಿಕೆಯನುಗುಣ ‘ಕೂಡಲೇ ಕ್ರಮ ಕೈಗೊಳ್ಳುವುದಾಗಿ’ ಭದ್ರತಾ ಸಮಿತಿಯು ತನ್ನ ಬಾಧ್ಯತೆಯನ್ನು ತಿಳಿಸಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !