ಸೋಮವಾರ, ಆಗಸ್ಟ್ 26, 2019
20 °C
ಬುಧವಾರ

ಮನಸ್ಸಾಕ್ಷಿಯಂತೆ ಮತದಾನ ಮಾಡಲು ಸ್ವಾತಂತ್ರ್ಯ: ಎಸ್ಸೆನ್‌ಗೆ ಇಂದಿರಾ ಒತ್ತಾಯ

Published:
Updated:

ಮನಸ್ಸಾಕ್ಷಿಯಂತೆ ಮತದಾನ ಮಾಡಲು ಸರ್ವ ಸ್ವಾತಂತ್ರ್ಯ: ಎಸ್ಸೆನ್‌ಗೆ ಇಂದಿರಾ ಗಾಂಧಿ ಒತ್ತಾಯ

ನವದೆಹಲಿ, ಆ. 12– ಶನಿವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಮತ್ತು ವಿಧಾನ ಮಂಡಲಗಳ ಸದಸ್ಯರಿಗೆ ಮತದಾನ ಸ್ವಾತಂತ್ರ್ಯ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರನ್ನು ಪ್ರಧಾನಿ ಇಂದಿರಾ ಗಾಂಧಿ ಕೇಳಿದ್ದಾರೆ.

ಶ್ರೀ ಸಂಜೀವರೆಡ್ಡಿ ಅವರಿಗೆ ಮತ ನೀಡುವಂತೆ ಸಂಸತ್ತಿನ ಕಾಂಗ್ರೆಸ್ ಸದಸ್ಯರಿಗೆ ಆದೇಶ ಕೊಡಬೇಕೆಂದು ಕೇಳಿ
ಶ್ರೀ ನಿಜಲಿಂಗಪ್ಪ ಅವರು ಬರೆದಿದ್ದ ಪತ್ರಕ್ಕೆ ಇದು ಉತ್ತರವೆಂದು ಗೊತ್ತಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಮತ ದಾನ ಸ್ವಾತಂತ್ರ್ಯವಿರಬೇಕೆಂದು ಗಾಂಧಿ ಬೆಂಬಲಿಗರು ಒತ್ತಾಯಿಸಿರುವುದರಿಂದ ಕಾಂಗ್ರೆಸ್ 84 ವರ್ಷಗಳ ಇತಿಹಾಸದಲ್ಲೇ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ.

Post Comments (+)