ಉದ್ಯೋಗಕ್ಕೂ ಇರಲಿ ಮೀಸಲಾತಿ

7

ಉದ್ಯೋಗಕ್ಕೂ ಇರಲಿ ಮೀಸಲಾತಿ

Published:
Updated:

ಮೌಂಟ್ ಎವರೆಸ್ಟ್ ಏರಿ ಸಾಹಸ ಮೆರೆಯುವ ವಿದ್ಯಾರ್ಥಿಗಳಿಗೆ ವೃತ್ತಿನಿರತ ಪದವಿ ಕೋರ್ಸ್‌ಗಳಿಗೆ ಸಿಇಟಿ ಮೂಲಕ ಪ್ರವೇಶ ಪಡೆಯಲು ಅನುವಾಗುವಂತೆ ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಮಗಳಿಗೆ ತಿದ್ದುಪಡಿ ತಂದಿರುವ ವಿಚಾರ ಕೇಳಿ ಸಂತೋಷವಾಯಿತು. ಈ ನಿರ್ಧಾರದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಎನ್‌ಸಿಸಿ ಸೇರಲು ಸಾಧ್ಯವಾಗುತ್ತದೆ.

ಈ ಮೂಲಕ, ದೇಶದ ರಕ್ಷಾಕವಚವಾಗಿರುವ ಸೇನಾ ಪಡೆಗಳಿಗೆ ಸೇರಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಎನ್‌ಸಿಸಿ ಸೇರಿ ವಿವಿಧ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣದಲ್ಲಿ ಮಾತ್ರವಲ್ಲದೆ, ಉದ್ಯೋಗದಲ್ಲೂ ಮೀಸಲಾತಿ ನೀಡಲು ಸರ್ಕಾರ ಮುಂದಾಗಬೇಕು.

–ಯೋಗೇಶ್ ವೈ.ಸಿ., ಮಂಡ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !