ಬುಧವಾರ, ನವೆಂಬರ್ 13, 2019
23 °C

ಜಾಲತಾಣಗಳ ಮೋಹ ಜಾಲದಲ್ಲಿ

Published:
Updated:

ಇತ್ತೀಚಿನ ದಿನಗಳಲ್ಲಿ ಜಾಲತಾಣಗಳ ಬಳಕೆ ಮಿತಿಮೀರುತ್ತಿದೆ. ಇದರ ಬಲೆಯಲ್ಲಿ ಸಿಲುಕಿರುವ ಜನರು ತಮ್ಮ ಸಮಯ, ಸೃಜನಶೀಲತೆ, ಬಾಂಧವ್ಯಗಳನ್ನು ಕಡೆಗಣಿಸುತ್ತಿದ್ದಾರೆ. ಒಂದೇ ಮನೆಯಲ್ಲಿ ವಾಸವಾಗಿದ್ದರೂ ಅಪ್ಪ-ಅಮ್ಮ, ಒಡಹುಟ್ಟಿದವರಿಗೆ ಹುಟ್ಟುಹಬ್ಬದ ಶುಭಾಶಯ, ಮದುವೆ ದಿನದ ಶುಭಕಾಮನೆಗಳನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಪರದೆಗಳ ಮೇಲೆ ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಮಾಯಾಜಾಲದ ಅಡ್ಡಪರಿಣಾಮಗಳ ಅರಿವಿಲ್ಲದೆಯೇ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಅಪ್‌ಡೇಟ್ ಮಾಡುತ್ತಿದ್ದೇವೆ. ಈ ಮೋಹಜಾಲದ ಮಾಯೆಯಿಂದ ಹೊರಬರಬೇಕು. ಬಾಂಧವ್ಯಗಳ ಬೆಸುಗೆಯ ಬಂಧನದಲ್ಲಿ ಬದುಕು ಸಾಗಿಸಬೇಕು.

-ಶೈಲಜ ವಿ., ಕೋಲಾರ

 

ಪ್ರತಿಕ್ರಿಯಿಸಿ (+)