ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಂಚೆ ಇಲಾಖೆಗೆ ಎಚ್ಚರಿಕೆಯ ಗಂಟೆ

Last Updated 27 ಆಗಸ್ಟ್ 2020, 18:36 IST
ಅಕ್ಷರ ಗಾತ್ರ

ಅಂಚೆ ಇಲಾಖೆಯ ಮೇಲೆ ಜನಸಾಮಾನ್ಯರು ಇಟ್ಟಿರುವ ವಿಶ್ವಾಸ ಇನ್ನೂ ಪೂರ್ತಿ ನಶಿಸಿಲ್ಲ ಎಂದು ಚೆನ್ನು ಅ. ಹಿರೇಮಠ ಅವರು ಹೇಳಿರುವುದು (ಸಂಗತ, ಆ. 26) ಸತ್ಯವಾದ ಮಾತು. ಆದರೆ ಪತ್ರಗಳನ್ನು ಬಟವಾಡೆ ಮಾಡುವವರಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ, ಸಂಬಂಧಪಟ್ಟ ಜಿಲ್ಲಾ ಅಂಚೆ ಅಧಿಕಾರಿಗಳು ಅವರಿಗೆ ಎಚ್ಚರಿಕೆ ಕೊಟ್ಟು, ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು.

ಅಂಚೆ ಬಟವಾಡೆ ಮಾಡುವವರು ಅಂಚೆ ಕಚೇರಿ ಹಾಗೂ ಜನರ ನಡುವಿನ ಸೇತು ಇದ್ದಂತೆ. ಅವರಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಇರಬೇಕು. ಇಲಾಖೆಯು ಪರಿಶ್ರಮದಿಂದ ಗಳಿಸಿದ್ದ ವಿಶ್ವಾಸವನ್ನು ಉಳಿಸಿಕೊಳ್ಳಲು ಸಿಬ್ಬಂದಿ ಪ್ರಯತ್ನಿಸಬೇಕು. ಅಂತಹ ವಿಶ್ವಾಸಕ್ಕೆ ಧಕ್ಕೆ ಉಂಟಾಗುವ ಬೆಳವಣಿಗೆಗಳು ನಡೆಯುತ್ತಿರುವುದು ಇಲಾಖೆಯ ಅಧಿಕಾರಿಗಳು ಹಾಗೂ ನೌಕರರಿಗೆ ಎಚ್ಚರಿಕೆಯ ಗಂಟೆಯಾಗಿದೆ.

-ಬಿ.ಎಸ್.ಮುಳ್ಳೂರ,ಹಲಗತ್ತಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT