ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಹೆಲ್ಮೆಟ್‌ಗಿರಲಿ ಕೊಂಚ ವಿನಾಯಿತಿ

Last Updated 14 ಜನವರಿ 2022, 19:30 IST
ಅಕ್ಷರ ಗಾತ್ರ

ಕೊರೊನಾದ ಈ ಕಾಲದಲ್ಲಿ ಮಾಸ್ಕ್ ಜೊತೆಗೆ ಕೆಲವರು ಮುಖಗವಸನ್ನೂ (ಫೇಸ್‌ ಶೀಲ್ಡ್) ಬಳಸುವುದು ಸಾಮಾನ್ಯವಾಗಿದೆ. ಆದರೆ ಇದರಿಂದ ನಿಜವಾಗಿಯೂ ಸಮಸ್ಯೆ ಎದುರಿಸುತ್ತಿರುವವರು ದ್ವಿಚಕ್ರ ವಾಹನ ಚಾಲಕರು. ಗಾಡಿ ಓಡಿಸಬೇಕಾದರೆ ಮಾಸ್ಕ್ ಧರಿಸಿ, ಫೇಸ್ ಶೀಲ್ಡ್ ಜೊತೆಗೆ ಹೆಲ್ಮೆಟ್ ಮೂರನ್ನೂ ಹಾಕಿಕೊಂಡು ವಾಹನ ಓಡಿಸುವುದು ಅಷ್ಟು ಸುಲಭವಲ್ಲ. ‌ನಮ್ಮ ಕಣ್ಣುಗಳ ಸುರಕ್ಷತೆಗಾಗಿ ಕೆಲವು ಸಲ ಹೆಲ್ಮೆಟ್‌ ಅನ್ನು ಪೂರ್ತಿ ಮುಚ್ಚಿಕೊಂಡು ಚಲಾಯಿಸಬೇಕಾಗುತ್ತದೆ. ಇನ್ನು ಅನೇಕರು ಕನ್ನಡಕ ಬೇರೆ ಹಾಕಿಕೊಳ್ಳಬೇಕಾಗುತ್ತದೆ. ಇದರಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಕೆಲ ದಿನಗಳ ಮಟ್ಟಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದಕ್ಕೆ ವಿನಾಯಿತಿ ನೀಡುವುದು ಒಳಿತು.

ಹರವೆಸಂಗಣ್ಣಪ್ರಕಾಶ್,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT