ತೆರಿಗೆ ಕಟ್ಟಲು ಮಾತ್ರ ನಾವು ಬೇಕೇ?

7

ತೆರಿಗೆ ಕಟ್ಟಲು ಮಾತ್ರ ನಾವು ಬೇಕೇ?

Published:
Updated:

‘ಮೇಲ್ಜಾತಿ ಮೀಸಲಾತಿ’ಗೆ ಹಲವರ ಕಣ್ಣು ಕೆಂಪಾಗಿರುವುದು ಆಶ್ಚರ್ಯಕರ. ಸಾಮಾಜಿಕವಾಗಿ ಮೇಲ್ವರ್ಗ ಎನಿಸಿಕೊಂಡ ಸಮುದಾಯಗಳಲ್ಲೂ ಆರ್ಥಿಕವಾಗಿ ಸಾಕಷ್ಟು ಬಡವರಿದ್ದಾರೆ. ಬ್ರಾಹ್ಮಣರು ಜಾತಿಯಲ್ಲಿ ಮುಂದುವರಿದವರಾದರೂ ಹೆಚ್ಚಿನವರು ಬಡವರೇ ಇದ್ದಾರೆ. ಅದಕ್ಕೇ ಕಥೆಗಳನ್ನು ಸಾಮಾನ್ಯವಾಗಿ ‘ಒಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ’ ಎಂದು ಪ‍್ರಾರಂಭಿಸುವುದು.

ಇದೇ ರೀತಿ ಆರ್ಯ ವೈಶ್ಯರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಉದಾಹರಣೆಗೆ ನಾನೇ. ಸುಮಾರು 50 ವರ್ಷಗಳಿಂದ ನ್ಯೂಸ್‌ಪೇಪರ್‌ಗಳನ್ನು ಮನೆಗಳಿಗೆ ಹಾಕುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದೇನೆ. ಬಡ್ಡಿ ಕಟ್ಟಿ ಸೋತಿದ್ದೇನೆ. ಯಾವ ರೀತಿಯ ಸರ್ಕಾರಿ ಸೌಲಭ್ಯವಿಲ್ಲ.

ಒಮ್ಮೆ ಫೀಸ್ ಕಟ್ಟಲು ನಿಧಾನವಾಯಿತು ಎಂದು ಶಾಲೆ ಯಿಂದ ಮಗಳನ್ನು ಮನೆಗೆ ಕಳುಹಿಸಿದ್ದರು. ಅದರಿಂದ ಮಗು ಅಳುತ್ತಾ ಇದ್ದುದನ್ನು ನೋಡಿ ಹೊಟ್ಟೆ ಕಿವುಚಿ ದಂತಾಯಿತು. ತೆರಿಗೆ ಕಟ್ಟಲು ಮಾತ್ರ ನಾವು ಬೇಕೇ? ಎಲ್ಲ ರಾಜಕೀಯ ಪಕ್ಷಗಳೂ ನಮ್ಮದು ಜಾತ್ಯತೀತ ರಾಷ್ಟ್ರ ಎಂದು ಹೇಳಿಕೊಳ್ಳುತ್ತವೆ. ಆದರೆ, ಪ್ರತಿ ಅರ್ಜಿಯಲ್ಲೂ  ‘ಜಾತಿ’ ಎಂಬ ಕಾಲಂ ಇದ್ದೇ ಇರುತ್ತದೆ. ಜನಪ್ರತಿನಿಧಿಗಳಿಗೆ
ನಿಜವಾಗಿಯೂ ಧೈರ್ಯ ಇದ್ದರೆ ಜಾತಿ ಕಾಲಂ ತೆಗೆದು ಹಾಕಲಿ. ಎಲ್ಲರಿಗೂ ಉಚಿತ ವಿದ್ಯಾಭ್ಯಾಸ ಕೊಡಲಿ.

ಸರ್ಕಾರಿ ಕೆಲಸದಲ್ಲಿ ಇರುವವರೊಬ್ಬರ ಮಗನಿಗೆ ಐಐಟಿ ಸೇರಲು ಧನಸಹಾಯ ಇದೆ, ನಂತರ ಹಾಸ್ಟೆಲ್‌ಗೂ
‌ಶುಲ್ಕವಿಲ್ಲ. ಹೀಗೆ ಸರ್ಕಾರದ ಸೌಲಭ್ಯ ಪಡೆದವರಿಗೆ ಮುಂದೆ ಸರ್ಕಾರಿ ನೌಕರಿ ಸಿಕ್ಕರೆ, ಆಗ ಅವರಿಂದ ಆ ಹಣ ವಸೂಲಿ ಮಾಡಬಹುದಲ್ಲವೇ? ನಾವು ಕಷ್ಟಪಡುವವರು ಕಷ್ಟಪಡುತ್ತಲೇ ಇರಬೇಕೇ? ದಶಕಗಳಿಂದ ಒದ್ದಾಡು
ತ್ತಿರುವ ನಮ್ಮಂತಹವರಿಗೆ ಪರಿಹಾರವೇ ಇಲ್ಲವೇ? 

ಕೆ.ರಂಗನಾಥ, ಮೈಸೂರು

ಬರಹ ಇಷ್ಟವಾಯಿತೆ?

 • 41

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !