ಗುರುವಾರ , ನವೆಂಬರ್ 14, 2019
23 °C

ಮನೆಹಾಳರ ಪಟ್ಟಿ ಬಿಡುಗಡೆಗೊಳಿಸಿ!

Published:
Updated:

‘ಅಕಾಡೆಮಿಗಳಿಗೆ ನೇಮಕ: ಮನೆಹಾಳು ಜನರಿಗೆ ಅವಕಾಶವಿಲ್ಲ’– ಸಚಿವರ ಹೇಳಿಕೆ (ಪ್ರ.ವಾ., ಅ. 19). ಸರಿಯಾಗೇ ಹೇಳಿದ್ದಾರೆ! ಸಂಸ್ಥೆಯ ಚುಕ್ಕಾಣಿ ಹಿಡಿದವರಿಗೆ ಮನೆ ಹಾಳು ಮಾಡುವ ಕೆಲಸ ಯಾಕಿರುತ್ತದೆ? ಇದು ಸಂಸ್ಥೆಗೆ ಸಂಬಂಧಪಟ್ಟಿದ್ದು!

‘ಮನೆ’ಗೆ ಅಲ್ಲ ತಾನೇ? ಹಾಗಾದರೆ ಅಕಾಡೆಮಿಗಳಿಗೆ ಈಗ ನೇಮಕಗೊಂಡವರನ್ನು ಬಿಟ್ಟು ಉಳಿದವರೆಲ್ಲಾ ಮನೆಹಾಳು ಜನರೇ? ದಯವಿಟ್ಟು ಪುರುಸೊತ್ತು ಮಾಡಿಕೊಂಡು, ಆ ಮನೆಹಾಳರ ಪಟ್ಟಿಯನ್ನು ಮಾಧ್ಯಮಗಳಲ್ಲಿ ಬಿಡುಗಡೆಗೊಳಿಸಿ ಸಚಿವರೇ. ಕನ್ನಡ ನಾಡಿನ ಜನ ಜಾಗೃತರಾಗಿ ಇರಬೇಕಲ್ಲಾ?!

– ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರತಿಕ್ರಿಯಿಸಿ (+)