ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಕ್ಸಿಡೆಂಟ್’ ನೆನಪಿಸಿದ ಹೇಯ ಕೃತ್ಯ

Last Updated 4 ಅಕ್ಟೋಬರ್ 2021, 15:17 IST
ಅಕ್ಷರ ಗಾತ್ರ

ಉತ್ತರಪ್ರದೇಶದಲ್ಲಿ ಪ್ರತಿಭಟನಾನಿರತರ ಮೇಲೆ ಸಚಿವರೊಬ್ಬರ ಬೆಂಗಾವಲು ಪಡೆಯ ವಾಹನಗಳು ಹರಿದು ರೈತರು ಸಾವಿಗೀಡಾಗಿರುವುದು ಶಂಕರ್‌ನಾಗ್ ಅವರ ‘ಆ್ಯಕ್ಸಿಡೆಂಟ್’ ಚಲನಚಿತ್ರವನ್ನು ನೆನಪಿಸುವಂತಿದೆ. ಈ ಹೇಯ ಕೃತ್ಯದ ವಿರುದ್ಧ ದನಿ ಎತ್ತಬೇಕಾದ ಜನಪ್ರತಿನಿಧಿಗಳು ಪಕ್ಷನಿಷ್ಠೆ, ವ್ಯಕ್ತಿನಿಷ್ಠೆ, ಅಧಿಕಾರ ವ್ಯಾಮೋಹ, ಕುರ್ಚಿಯ ಪ್ರೀತಿಗೆ ತಮ್ಮ ಸಂವೇದನೆ, ಸೂಕ್ಷ್ಮತೆಗಳನ್ನು ಮಾರಿಕೊಂಡು ಬೆತ್ತಲಾಗಿ ನಿಲ್ಲುತ್ತಾರೆ. ಕೊಲೆ, ಹತ್ಯೆ, ಅತ್ಯಾಚಾರ, ದೌರ್ಜನ್ಯಗಳನ್ನು ಸಂಭ್ರಮಿಸುವ ಸಂಸ್ಕೃತಿಯನ್ನು ಪೋಷಿಸಲಾಗುತ್ತಿದೆ. ಕನಿಷ್ಠ ಮಾನವಪ್ರಜ್ಞೆ ಇರುವ ಪ್ರತಿಯೊಬ್ಬ ಪ್ರಜೆಯೂ ಈ ಹತ್ಯೆಯ ವಿರುದ್ಧ ದನಿ ಎತ್ತಬೇಕಿದೆ. ದನಿ ಎತ್ತೋಣ, ಕ್ಷೀಣವಾದರೂ ಸರಿ ಈ ದನಿ ಕ್ರೂರ ವ್ಯವಸ್ಥೆಯನ್ನು ಎಚ್ಚರಿಸಲಿದೆ.

-ನಾ.ದಿವಾಕರ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT