ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘನಾಶಿನಿ ಕಣಿವೆ: ವಿರೋಧ ಸರಿಯಲ್ಲ

Last Updated 14 ಜೂನ್ 2019, 19:45 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಶರಾವತಿ ಹಾಗೂ ಅಘನಾಶಿನಿ ನದಿ ಕಣಿವೆಗಳ ಅರಣ್ಯ ಪ್ರದೇಶವನ್ನು ಶಿವಮೊಗ್ಗ ಜಿಲ್ಲೆಯ ಅಭಯಾರಣ್ಯಕ್ಕೆ ಸೇರ್ಪಡೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಕೆಲ ಪರಿಸರವಾದಿಗಳು, ತಜ್ಞರು, ರೈತರು, ಅಧ್ಯಾಪಕರು ತಕರಾರು ಎತ್ತಿದ್ದಾರೆ (ವಾ.ವಾ., ಜೂನ್‌ 13). ಒಂದೆಡೆ, ಅರಣ್ಯಗಳು, ವನ್ಯಜೀವಿಗಳು ಉಳಿಯಬೇಕೆಂದು ಹೇಳುವ ಇವರು, ಜೀವವೈವಿಧ್ಯ ಉಳಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಸರ್ಕಾರದ ಈ ಅಪರೂಪದ ನಿರ್ಧಾರವನ್ನು ವಿರೋಧಿಸುತ್ತಿರುವುದು ವಿರೋಧಾಭಾಸದಿಂದ ಕೂಡಿದೆ.

ಸಂರಕ್ಷಿತ ತಾಣವನ್ನು ಅಭಯಾರಣ್ಯವನ್ನಾಗಿ ಪರಿವರ್ತಿಸಿದರೆ ಅದರಿಂದ ಮಾನವನ ಹಸ್ತಕ್ಷೇಪ ಕಡಿಮೆಯಾಗುತ್ತದೆ. ಅಪರೂಪದ ಸಿಂಗಳೀಕಗಳೊಂದಿಗೆ ಇತರ ಜೀವವೈವಿಧ್ಯದ ವಿಕಾಸಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗುತ್ತದೆ. ಅಲ್ಲದೆ, ಇನ್ನೂ ಮಲಿನಗೊಳ್ಳದ ಅಘನಾಶಿನಿ ನದಿಯನ್ನು ಭವಿಷ್ಯದಲ್ಲಿಯೂ ಸ್ವಚ್ಛಂದವಾಗಿ ಹರಿಯಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ಪರಿಸರ ಉಳಿಸುವ ಹೋರಾಟಗಳಲ್ಲಿ ಮೂಂಚೂಣಿಯಲ್ಲಿರುವ ಇವರು, ಸರ್ಕಾರದ ದೂರದೃಷ್ಟಿಯ ಈ ನಿರ್ಧಾರಕ್ಕೆ ಸೈ ಎನ್ನಬೇಕು.

–ಮಹಾಂತೇಶ ಗಂಗಯ್ಯ ಓಶಿಮಠ,ಮಲ್ಲಾಪುರ, ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT