ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಟೋಲ್‌ ಶುಲ್ಕ: ನಷ್ಟ ಸಮೀಕರಣ ಬೇಡ

Last Updated 23 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಎಲ್ಲಾ ಹೆದ್ದಾರಿಗಳಲ್ಲಿ ಪ್ರತೀ 60 ಕಿ.ಮೀಗೆ ಒಂದೇ ಟೋಲ್‌ ಸಂಗ್ರಹ ಕೇಂದ್ರ ಇರಲಿದ್ದು, 60 ಕಿ.ಮೀ. ಅಂತರದ ನಡುವೆ ಇರುವಂತಹ ಹೆಚ್ಚುವರಿ ಟೋಲ್‌ ಬೂತ್‌ಗಳನ್ನು ಮೂರು ತಿಂಗಳೊಳಗಾಗಿ ಮುಚ್ಚಲಾಗುವುದು ಎಂಬ, ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವರ ಹೇಳಿಕೆಯು ವಾಹನ ಸವಾರರಿಗೆ ಸ್ವಲ್ಪಮಟ್ಟಿಗೆ ನಿರಾಳ ಭಾವ ಉಂಟುಮಾಡಿದೆ. 60 ಕಿ.ಮೀ. ಅಂತರದಲ್ಲಿ ಎರಡು– ಮೂರು ಟೋಲ್‌ ಬೂತ್‌ಗಳು ಇರುವುದಲ್ಲದೆ, ಕೆಲವು ಕಡೆ 7 ಕಿ.ಮೀ. ಅಂತರದಲ್ಲೂ ಎರಡೆರಡು ಟೋಲ್‌ ಬೂತ್‌ಗಳು ಇವೆ. ಸಾರಿಗೆ ಸಚಿವರ ಈ ಕ್ರಮ, ಪ್ರಯಾಣದ ಅವಧಿ ಕಡಿಮೆ ಮಾಡುವುದರೊಂದಿಗೆ ವಾಹನ ಸವಾರರಿಗೆ ಟೋಲ್‌ ಕಿರಿಕಿರಿಯನ್ನೂ ತಗ್ಗಿಸುತ್ತದೆ. ಕೊನೆಗೂ ಸಾರಿಗೆ ಸಚಿವರು ಟೋಲ್‌ ಶುಲ್ಕ ನಿಯಮಾವಳಿಗೆ ಬದ್ಧರಾಗಿದ್ದು ಸಂತಸದ ವಿಷಯ. ಆದರೆ, ಈ ದಿಸೆಯಲ್ಲಿ ಆಗುವ ನಷ್ಟವನ್ನು ಟೋಲ್‌ ಶುಲ್ಕವನ್ನು ಏರಿಸುವುದರ ಮೂಲಕ ಸಮೀಕರಿಸದಿರಲಿ.

–ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT