ಇನ್ನೊಂದು ಮುಖ

7

ಇನ್ನೊಂದು ಮುಖ

Published:
Updated:

ದ್ರಾವಿಡರ ಅನಭಿಷಕ್ತ ದೊರೆ, ಮುತ್ಸದ್ದಿ, ಚಿತ್ರ ಸಂಭಾಷಣೆಕಾರ, ಕಥೆ- ಕಾದಂಬರಿಕಾರ, 13 ಸಲ ಶಾಸಕನಾಗಿ ಆಯ್ಕೆಯಾದ, ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ, ಹುಟ್ಟು ಹೋರಾಟಗಾರ ಎಂ. ಕರುಣಾನಿಧಿ.

ಅತ್ಯಂತ ಜನಪ್ರಿಯ ನಾಯಕರು ಅವರು.ಹಾಗೆಂದು ಅವರ ಮೇಲೆ ಆರೋಪಗಳಿರಲಿಲ್ಲ ಎಂದಲ್ಲ. ಅವರು ಅನೇಕ ಬಾರಿ ಭ್ರಷ್ಟಾಚಾರದ ಅಪಾದನೆಗೆ ಒಳಗಾಗಿದ್ದಾರೆ. ಎಲ್‍ಟಿಟಿಇ ಬಗ್ಗೆ ಅವರು ಮೃದು ಧೋರಣೆ ಹೊಂದಿದ್ದರು. ‘ಎಲ್‍ಟಿಟಿಇ ಮುಖ್ಯಸ್ಥ ಪ್ರಭಾಕರನ್ ನನ್ನ ಸ್ನೇಹಿತ’ ಎಂಬ ಅವರ ಹೇಳಿಕೆಯು ದೇಶದಾದ್ಯಂತ ಚರ್ಚೆಯ ವಿಷಯವಾಗಿತ್ತು.

‘ರಾಜೀವ್‌ ಗಾಂಧಿ ಹತ್ಯೆಗೆ ಎಲ್‍ಟಿಟಿಇಗೆ ಕರುಣಾನಿಧಿ ಕುಮ್ಮಕ್ಕು ನೀಡಿದ್ದರು’ ಎಂಬ ಬಗ್ಗೆ ಜಸ್ಟಿಸ್ ಜೈನ್ ಸಮಿತಿಯು ಅರಂಭದಲ್ಲಿ ಶಂಕೆ ವ್ಯಕ್ತಪಡಿಸಿತ್ತು. ಆದರೆ ಅಂತಿಮ ವರದಿಯಲ್ಲಿ ಆ ವಿವರ ಮಾಯವಾಗಿತ್ತು. ರಾಮಸೇತು ಕುರಿತು, ‘ರಾಮ ಯಾವ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದ, ಸೇತುವೆ ಕಟ್ಟಿಸಿದ್ದಕ್ಕೆ ಸಾಕ್ಷ್ಯ ಇದೆಯಾ?’ ಎಂದು ಹೇಳಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅವರ ಕೆಲವು ಹೇಳಿಕೆಗಳಿಂದಾಗಿ ಅವರ ಅಭಿಮಾನಿಗಳು ಮುಜುಗರ ಪಟ್ಟಿದ್ದುಂಟು. ಇದು ಕರುಣಾನಿಧಿಯ ಇನ್ನೊಂದು ಮುಖ.

ಗಂಗಾಧರ ಅಂಕೋಲೆಕರ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !