ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ತೊಡಿಸುವವರು ಯಾರು?

Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಎರಡು ಘಟನೆಗಳ ಕುರಿತು ರವೀಂದ್ರ ಭಟ್ಟ ಅವರು ಬರೆದ ‘ಬೆತ್ತಲಾಗುತ್ತಲೇ ಇದೆ ಮನುಷ್ಯತ್ವ’ (ಪ್ರ.ವಾ., ಜೂನ್ 25) ಅಂಕಣವು ಸಮಾಜದ ನಿಜವಾದ ಬೆತ್ತಲೆಯ ಚಿತ್ರಣವನ್ನು ನೀಡುತ್ತದೆ. ದೇವಾಲಯವನ್ನು ‘ಅಪವಿತ್ರ’ಗೊಳಿಸಿದ ಎಂಬ ಕಾರಣಕ್ಕೆ ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿದ್ದು, ಬಡ್ಡಿ ಹಣ ವಸೂಲಾತಿಗಾಗಿ ಕುಟುಂಬವೊಂದರ ಹೆಣ್ಣುಮಗುವನ್ನೇ ಒತ್ತೆ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನಡೆಸಿರುವುದು ನಾಗರಿಕರು ಅರಗಿಸಿಕೊಳ್ಳಲಾರದಂತಹ ಘಟನೆಗಳು.

ಇಂತಹ ಘಟನೆಗಳನ್ನು ಕಂಡಾಗ, ಮನುಷ್ಯನ ಮಾನವೀಯತೆಯ ಕವಚ ಕಳಚಿದಂತೆ ತೋರುತ್ತದೆ. ಈ ಬಗೆಯ ಸ್ಥಿತಿ ಬದಲಾಗದಿದ್ದರೆ ಮುಂದಿನ ದಿನಗಳಲ್ಲಿ ‘ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಅದಕ್ಕೆ ಮನ್ನಣೆ ಬರುತ್ತದೆಯೇ’ ಎಂಬ ಮಾತು ಪ್ರಸ್ತುತವಾಗಬಹುದು. ಹಾಗಾದರೆ ಈ ಬೆತ್ತಲೆ ಸಮಾಜಕ್ಕೆ ಬಟ್ಟೆ ತೊಡಿಸುವವರು ಯಾರು? ಇದಕ್ಕೆ ಮಾನವೀಯತೆ ಎಂಬ ಬಟ್ಟೆ ತೊಡುವುದರ ಹೊರತು ಬೇರೆ ದಾರಿ ಇಲ್ಲ.

- ಯೋಗೇಶ್ ವೈ.ಸಿ.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT