ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹೆಚ್ಚುವರಿ ಮಹಡಿ: ಅಪಾಯ ಮನಗಾಣಿ

Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ದೆಹಲಿಯ ಸಮೀಪದ ನೊಯಿಡಾದಲ್ಲಿ ಕಾನೂನುಬಾಹಿರವಾಗಿ ಕಟ್ಟಿದ್ದ ಗಗನಚುಂಬಿ ಅವಳಿ ಕಟ್ಟಡಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ನಿರ್ದಾಕ್ಷಿಣ್ಯವಾಗಿ ಕೆಡವಲಾಗಿದೆ. ಬೆಂಗಳೂರೂ ಸೇರಿದಂತೆ ಅದೆಷ್ಟು ನಗರಗಳಲ್ಲಿ ಈ ರೀತಿಯ ಅನುಮತಿ ಮೀರಿ ಕಟ್ಟಿದ ಕಟ್ಟಡಗಳಿವೆಯೋ ಏನೋ? ದುರಾಸೆಯ ಬಿಲ್ಡರ್‌ಗಳು ಮಾತ್ರ ಹೀಗೆ ಕಾನೂನುಬಾಹಿರವಾಗಿ ಕಟ್ಟಡ ಕಟ್ಟುವುದಲ್ಲ, ಈ ವಿಷಯದಲ್ಲಿ ಜನಸಾಮಾನ್ಯರೂ ಕಡಿಮೆ ಏನಿಲ್ಲ.

ಚಿಕ್ಕ ಸೈಟುಗಳಲ್ಲಿ ಒಂದೆರಡು ಮಹಡಿಗಳಿಗೆ ಅನುಮತಿ ದೊರಕಿದರೆ ಮೂರು– ನಾಲ್ಕು ಮಹಡಿಗಳನ್ನು ಅದೆಷ್ಟು ಮಂದಿ ಕಟ್ಟಿ ಬಾಡಿಗೆಗೆ ನೀಡಿ ವಿಪರೀತ ದುಡ್ಡು ಮಾಡುವುದಿಲ್ಲ? ಇಂತಹ ಹೆಚ್ಚುವರಿ ಮಹಡಿಗಳಿಂದ ಅಲ್ಲಿ ವಾಸವಾಗಿರುವವರಿಗಷ್ಟೇ ಅಲ್ಲ ನೆರೆಹೊರೆಯವರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಕಾನೂನುಬಾಹಿರವಾಗಿ ಕಟ್ಟಿದ ಮಹಡಿಗಳ ಸರ್ವೆ ನಡೆಸಿ ಒಂದು ವರ್ಷದ ಒಳಗೆ ಕೆಡವುವಂತೆ ಎಲ್ಲ ರಾಜ್ಯಗಳ ಸರ್ಕಾರಗಳಿಗೆ ನ್ಯಾಯಾಲಯಗಳು ಕೂಡಲೇ ಆದೇಶ ನೀಡಬೇಕು. ಜನಹಿತದ ದೃಷ್ಟಿಯಿಂದ ಇದು ಅಪೇಕ್ಷಣೀಯ.

-ಬಿ.ಎನ್.ಭರತ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT