ಕೇಜ್ರಿವಾಲ್ ಮಾತಿಗೆ ಪ್ರತಿಕ್ರಿಯೆ: ಹುದ್ದೆಯಲ್ಲಿ ಮೇಲು–ಕೀಳು ಇಲ್ಲ

ಸೋಮವಾರ, ಏಪ್ರಿಲ್ 22, 2019
29 °C

ಕೇಜ್ರಿವಾಲ್ ಮಾತಿಗೆ ಪ್ರತಿಕ್ರಿಯೆ: ಹುದ್ದೆಯಲ್ಲಿ ಮೇಲು–ಕೀಳು ಇಲ್ಲ

Published:
Updated:

‘ನಿಮ್ಮ ಮಕ್ಕಳು ವಾಚ್‌ಮ್ಯಾನ್ ಆಗಬೇಕು ಎಂದರೆ ಮೋದಿ ಅವರಿಗೆ ಮತ ನೀಡಿ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಡಾಕ್ಟರ್, ಎಂಜಿನಿಯರ್ ಅಥವಾ ವಕೀಲರಾಗಬೇಕೆಂದರೆ ಪ್ರಾಮಾಣಿಕ ಮತ್ತು ಸುಶಿಕ್ಷಿತರಾಗಿರುವ ಎಎಪಿ ಅಭ್ಯರ್ಥಿಗಳಿಗೆ ಮತ ನೀಡಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ನಾವು ಜೀವನ ನಿರ್ವಹಣೆಗಾಗಿ ಮಾಡುವ ಯಾವುದೇ ಕೆಲಸವೂ ಮೇಲುಕೀಳೆಂಬ ಭೇದ ಭಾವದಿಂದ ಕೂಡಿರುವುದಿಲ್ಲ. ಅದು ನಮ್ಮ ನಮ್ಮ ಶ್ರಮ, ಗುರಿ, ಗಟ್ಟಿತನಕ್ಕೆ ಅನುಗುಣವಾಗಿ ಸಿಕ್ಕಿದ ಫಲ ಎಂಬುದರ ಅರಿವಿಲ್ಲದೆ ಅವರು ಮಾತನಾಡಿದ್ದಾರೆ. ಶ್ರದ್ಧೆ, ನಿಷ್ಠೆಯಿಂದ ಮಾಡುವ ಪ್ರತೀ ಕೆಲಸ ಯಾವುದೇ ಅತ್ಯುನ್ನತ  ಹುದ್ದೆಗೆ ಸಮ.

ಕೇಜ್ರಿವಾಲ ಅವರಿಗೆ ಬರೀ ಡಾಕ್ಟರ್, ಎಂಜಿನಿಯರ್ ಅಥವಾ ವಕೀಲರೇ ಮತ ನೀಡಿ ಗೆಲ್ಲಿಸಿದ್ದಾರೆಯೇ? ಅವರ ಕಾರು ಚಾಲಕ ಶ್ರದ್ಧೆಯಿಂದ ತನ್ನ ಕೆಲಸವನ್ನು ಮಾಡದಿದ್ದರೆ ಅವರು ನೆಮ್ಮದಿಯಾಗಿ ಪ್ರಯಾಣಿಸಲು ಸಾಧ್ಯವೇ? ಪ್ರತೀ ಕೆಲಸಗಾರನ ಅವಶ್ಯಕತೆ ಈ ಸಮಾಜಕ್ಕೆ ಇದೆ. ಅದಕ್ಕೆ ದೊಡ್ಡದು, ಸಣ್ಣದೆಂಬ ಅಳತೆಗೋಲುಗಳು ಇರುವುದಿಲ್ಲ. 

-ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !