ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದಿರುವವರು ಅತಿಥಿಗಳೇ?

7

ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದಿರುವವರು ಅತಿಥಿಗಳೇ?

Published:
Updated:

ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವವರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆ ಕುರಿತ ತಮ್ಮ ವಿರೋಧದ ಸಮರ್ಥನೆಗಾಗಿ ಉಪನಿಷತ್ತು ಮತ್ತು ರಾಮಾಯಣವನ್ನೂ ಎಳೆತಂದಿರುವ ಆಕಾರ್ ಪಟೇಲರ ವಾದಚಾತುರ್ಯಕ್ಕೆ ತಲೆದೂಗಲೇಬೇಕು (ಪ್ರ.ವಾ., ಆ. 6). 

ಅತಿಥಿ ಸತ್ಕಾರದ ಬಗ್ಗೆ, ಹಿಂದೂ ಆಗಿರುವುದರ ನೈಜ ಅರ್ಥದ ಬಗ್ಗೆ, ಹಿಂದೂ ಮಾನವೀಯತೆ ಏನು ಎಂಬುದರ ಬಗ್ಗೆ ಇಷ್ಟೆಲ್ಲಾ ಉಪನ್ಯಾಸ ನೀಡುವವರಿಗೆ ‘ಅತಿಥಿ’ ಎಂಬ ಶಬ್ದದ ಶಾಬ್ದಿಕ ಅರ್ಥವೂ ಗೊತ್ತಿದ್ದಿರಲೇಬೇಕಲ್ಲವೇ? ಅತಿಥಿಗಳೆಂದರೆ, ಬಂದು ಕೆಲವು ದಿನಗಳ ಕಾಲ ಮಾತ್ರ ನಮ್ಮಲ್ಲಿ ತಂಗಿದ್ದು, ನಮ್ಮ ಸತ್ಕಾರದಿಂದ ಸಂತುಷ್ಟರಾಗಿ ‘ಇನ್ನೂ ಇರಿ’ ಎಂದು ನಾವು ಒತ್ತಾಯ ಮಾಡಿದರೂ ಕೇಳದೆ ತಮ್ಮ ಊರು, ಮನೆಗಳಿಗೆ ಹೊರಟುಹೋಗುವವರು. ಅತಿಥಿಗಳು ಆತಿಥೇಯರಿಗೆ ಯಾವತ್ತೂ ಭಾರವಾಗಿ ಇರುವವರೇ ಅಲ್ಲ. ಅವರ ತಲೆಯ ಮೇಲೆ ಸವಾರಿ ಮಾಡುವವರಂತೂ ಅಲ್ಲವೇ ಅಲ್ಲ. ಇವರು ಬರಹದಲ್ಲಿ ಪ್ರಸ್ತಾಪಿಸಿರುವವರಾರೂ ಅಂಥ ಅತಿಥಿಗಳಲ್ಲವೇ ಅಲ್ಲ.

ಭೌಗೋಳಿಕವಾಗಿ ಭಾರತಕ್ಕಿಂತ ಹಲವು ಪಟ್ಟು ದೊಡ್ಡದಾಗಿದ್ದು, ಸಂಪನ್ಮೂಲಗಳ ಕೊರತೆ ಅಷ್ಟಾಗಿ ಇರದ ಅಮೆರಿಕದಂಥ ಶ್ರೀಮಂತ ದೇಶವೇ ಅಕ್ರಮ ವಲಸಿಗರ ವಿಷಯಕ್ಕೆ ಕಠಿಣವಾಗಿ ವರ್ತಿಸುತ್ತಿರುವಾಗ, ಜನಸಂಖ್ಯಾ ಸ್ಫೋಟದಿಂದ, ನಿರುದ್ಯೋಗ ಸಮಸ್ಯೆಯಿಂದ, ಹೊರಗಿನ ಮತ್ತು ಒಳಗಿನ ಭಯೋತ್ಪಾದಕರಿಂದ ಬಿರಿದುಹೋಗುತ್ತಿರುವ ಭಾರತವು ಅಕ್ರಮ ವಲಸಿಗರ ವಿಷಯಕ್ಕೆ ಏಕೆ ನಿಷ್ಠುರವಾಗಬಾರದು? ಭಾರತದ ನೆರವಿನಿಂದಲೇ ತನ್ನ ಅಸ್ತಿತ್ವ ಕಂಡುಕೊಂಡ ಬಾಂಗ್ಲಾದೇಶವು ಪ್ರಾರಂಭದ ಒಂದೆರಡು ವರ್ಷಗಳನ್ನು ಹೊರತುಪಡಿಸಿದರೆ ಆನಂತರದಲ್ಲಿ ತೀವ್ರವಾದ ಭಾರತ ದ್ವೇಷವನ್ನು ಪೋಷಿಸಿಕೊಂಡೇ ಬಂದಿತ್ತು. ಈಗೇನೋ ರಾಜಕೀಯ ಕಾರಣಗಳಿಗಾಗಿ ಸ್ವಲ್ಪ ಬದಲಾಗಿರಬಹುದು ಅಷ್ಟೆ. ಈ ಅಕ್ರಮ ವಲಸೆಯನ್ನು ತಡೆಯದಿದ್ದರೆ ಇದಕ್ಕೆ ಕೊನೆಯೆಲ್ಲಿ? ಹೀಗೆ ಬಂದವರು ಹೊಟ್ಟೆ ಹೊರೆಯಲು ಕೆಲಸವಿಲ್ಲದೆ ಜೀವನ ನಿರ್ವಹಣೆಗಾಗಿ ಅನೈತಿಕ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗಿ, ಈಗಾಗಲೇ ಇರುವ ಅಂಥವರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಾರೆ ಅಷ್ಟೆ.

ಬರಹ ಇಷ್ಟವಾಯಿತೆ?

 • 54

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !