ಮಹಿಳೆ ಮೇಲೆ ಹಲ್ಲೆ ಹೇಯ ಕೃತ್ಯ

ಬುಧವಾರ, ಜೂನ್ 19, 2019
30 °C

ಮಹಿಳೆ ಮೇಲೆ ಹಲ್ಲೆ ಹೇಯ ಕೃತ್ಯ

Published:
Updated:

ಚೀಟಿ ವ್ಯವಹಾರದ ಬಾಕಿ ಹಣ ನೀಡುವಂತೆ ಒತ್ತಾಯಿಸಿ ಬೆಂಗಳೂರು ಹೊರವಲಯದ ಕೊಡಿಗೇಹಳ್ಳಿಯಲ್ಲಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವುದು ಹೇಯ ಮತ್ತು ಅಮಾನವೀಯ (ಪ್ರ.ವಾ., ಜೂನ್‌ 14). ಇಂಥ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ನಮ್ಮ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ನಿದರ್ಶನ.

ಮಾನವ ಸಮಾಜ ‘ಸಾಮಾಜಿಕ ಒಪ್ಪಂದ’ದ ಅನ್ವಯ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಒಂದೋ, ಜನರಿಗೆ ಈ ರೀತಿಯ ವ್ಯವಸ್ಥೆ ಇದೆ ಎಂಬ ಅರಿವಿಲ್ಲ. ಇಲ್ಲವೇ, ಈ ವ್ಯವಸ್ಥೆಯ ಮೇಲೆ ಅವರು ನಂಬಿಕೆ ಕಳೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒಂದು ವ್ಯವಸ್ಥಿತ ಕ್ರಮ ಇದೆ. ಇದಕ್ಕೆಂದೇ ಪೊಲೀಸ್, ಕೋರ್ಟ್, ಕಾಯ್ದೆ ಇರುವುದು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾವುದೇ ವ್ಯಕ್ತಿಗೆ ಅಧಿಕಾರ ಇಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು. ಈ ಮೂಲಕ, ವ್ಯವಸ್ಥೆ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸಬೇಕಾಗಿದೆ.

–ದರ್ಶನ್ ಕೆ.ಓ., ದೇವಿಕೆರೆ ಹೊಸೂರು

ಇದನ್ನೂ ಓದಿ...  ಸಾಲದ ಹಣ ವಾಪಸ್‌ ನೀಡದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಕಿರುಕುಳ, ಹಲ್ಲೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !