ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪ್ರಶ್ನೆ‍ಪತ್ರಿಕೆ ಎಡವಟ್ಟು: ಕಹಿಸತ್ಯ

Last Updated 24 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿನ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಇದ್ದ ತಪ್ಪುಗಳನ್ನು ಪತ್ರಿಕಾ ವರದಿಗಳ ಮೂಲಕ ತಿಳಿದಾಗ, ಬೇವಿನ ಬೀಜ ಬಿತ್ತಿ ಮಾವಿನ ಫಲ ಬೇಡಿದರೆ ಹೇಗೆ ಎನಿಸಿತು. ಇದು ಕಹಿಯಾದರೂ ಸತ್ಯ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕೂಡ ಕನ್ನಡ ಭಾಷಾ ವಿಷಯವನ್ನು ತಾತ್ಸಾರವಾಗಿ ನೋಡಲಾಗುತ್ತಿದೆ. ಜೊತೆಗೆ ಶಾಲಾ ಹಂತಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಗಣಿತ, ವಿಜ್ಞಾನ, ಸಮಾಜವಿಜ್ಞಾನವನ್ನು ಬೋಧಿಸುವ ಶಿಕ್ಷಕರು ಕನ್ನಡ ಭಾಷಾ ವಿಷಯವನ್ನು ಬೋಧಿಸುತ್ತಾರೆ ಹಾಗೂ ಖಾಸಗಿ ಶಾಲೆಗಳು ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸಿಕೊಳ್ಳದೆ ಇಂಗ್ಲಿಷ್ ಹಾಗೂ ವಿಜ್ಞಾನ ಶಿಕ್ಷಕರೇ ಕನ್ನಡ ಬೋಧಿಸುವಂತೆ ಮಾಡುತ್ತವೆ.

ಇದಕ್ಕೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಹಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಅವಕಾಶವನ್ನೇ ಕಲ್ಪಿಸಿಲ್ಲ. ಕಾರಣ ಹೀಗಿರುವಾಗ ಶುದ್ಧ ಕನ್ನಡವನ್ನು ಅಥವಾ ಶುದ್ಧ ಕನ್ನಡ ಕಲಿಕೆಯನ್ನು ನಿರೀಕ್ಷಿಸುವುದು ಹೇಗೆ?

-ಸುವರ್ಣ ಸಿ.ಡಿ., ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT