ನುಡಿ ನಮನ...

7

ನುಡಿ ನಮನ...

Published:
Updated:

ಬೀಜ ಬಿತ್ತುವ ಯೋಗಿ ಈ ಭವಕೆ ಬಂದು
ಹಾಡುತ್ತ ಬೆಳೆದನು, ಏನು ಅಚ್ಚರಿಯು
ಯಾರ ನೋಯಿಸಲಿಲ್ಲ, ಯಾರ ಬೇಡಲೂ ಇಲ್ಲ
ತಾಯಿ ಭಾರತಿ ಮುಡಿಗೆ ತಾನಾದ ಹೂವು.
ಹೆಣ್ಣು ಹೊನ್ನಿನ ಆಸೆ ಕಿಂಚಿತ್ತು ಇಡದೆ
ಸಂಸತ್ತು ಹೊಕ್ಕನು ಹತ್ತು ಬಾರಿ
ಮಾತು ಮಾತಲಿ ಬೆಣ್ಣೆ ತೆಗೆಯುತ್ತಲಿದ್ದು
ಉಣಿಸಿದನು ಎಲ್ಲರಿಗೆ ಅಮೃತದ ಸವಿಯ.
ಮೈಯ ಕಣ ಕಣದಿಂದ ದೇಶ ಪ್ರೇಮವ ತೆಗೆದು
ನುಡಿ, ನಡತೆ, ಕೃತಿಯಲ್ಲಿ ತೂಗಿಬಿಟ್ಟ
ಪ್ರಧಾನ ಮಂತ್ರಿಯ ಹುದ್ದೆ ಏರಿದನು ಛಲದಿಂದ
ರಸ್ತೆ ಮಾಡಿದನಲ್ಲ ನಾಲ್ಕು ನಾಲ್ಕು.
ಕೆಸರಿನಲಿ ಇದ್ದರೂ ಕೆಸರು ಮೆತ್ತದೆ ನಡೆದು
ಕಮಲ ಎತ್ತಿದ ನೋಡು ಅಡ್ವಾಣಿ ಜೋಡು
ಆಳ ಬೇರಿನ ಪಕ್ಷ ಕಿತ್ತೊಗೆದು ನೆಟ್ಟನು
ಜನಸಂಘ, ಬಿಜೆಪಿ ಬೆಳೆಸಿ ಜೋರು.
ನದಿಗಳನು ಜೋಡಿಸುವ ಕನಸು ಹೊತ್ತವನು
ಎದ್ದು ಹೋದನು ತನ್ನ ಸದ್ದು ಅಡಗಿ
ಸದ್ಭಾವ, ಸದ್ಗುಣ, ಸದಾಚಾರ ಬೆಳೆ ಉಣಿಸಿ
ಹೋದನವ ಪಂಚಭೂತಗಳಲಿ ಲೀನವಾಗಿ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !