ಅಟಲ್‌ ನೆನಪು ಅಪೂರ್ಣ

7

ಅಟಲ್‌ ನೆನಪು ಅಪೂರ್ಣ

Published:
Updated:

ವಾಜಪೇಯಿ ಅವರನ್ನು ಮಾತಿನ ಮೋಡಿಗಾರ, ಕವಿ ಹೃದಯಿ, ಮಾನವತಾವಾದಿ ಎಂದೆಲ್ಲ ಬಣ್ಣಿಸಿರುವುದು ಸರಿ. ಆದರೆ, ಅವರ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಆದ ಪರಿವರ್ತನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ದೇಶದ ನಾಲ್ಕು ಭಾಗಗಳನ್ನು ಬೆಸೆಯುವ ಸುವರ್ಣ ಚತುಷ್ಪಥ ರಸ್ತೆಗಳು ಮತ್ತು ಹಳ್ಳಿಗಳಿಂದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನ’ ದೇಶದ ಆರ್ಥಿಕ ಪ್ರಗತಿಗೆ ಭಾರಿ ವೇಗ ನೀಡಿದವು. ಇವು ಅವರ ಕಾಲದ ಸಾಧನೆ. ಅಪಾರ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾದವು. ದೇಶದ ಮಧ್ಯಮ ವರ್ಗಕ್ಕೆ ಅಡುಗೆ ಅನಿಲ ಮತ್ತು ಮನೆಗೊಂದು ದೂರವಾಣಿ ಸಿಗಲಾರಂಭಿಸಿದ್ದು ಅಟಲ್‌ ಕಾಲದಲ್ಲಿಯೇ ಅಲ್ಲವೇ? ಐಟಿ- ಬಿಟಿ ಕ್ರಾಂತಿಗೆ, ವಿದೇಶಿ ಬಂಡವಾಳ ಹರಿದು ಬರಲು ಹೆಚ್ಚಿನ ಒತ್ತು ನೀಡಿದರು.

ಗ್ರಾಮೀಣ ಪ್ರದೇಶದ ನಿರುದ್ಯೋಗ ನಿವಾರಣೆಗೆ ಕೂಲಿಗಾಗಿ ಕಾಳು ಯೋಜನೆ (ಇದನ್ನು ನಂತರ ಯುಪಿಎ ಸರ್ಕಾರ ನರೇಗಾ ಎಂದು ರೂಪಾಂತರಿಸಿತು), ನಿರ್ಗತಿಕರಿಗಾಗಿ ಅಂತ್ಯೋದಯ ಅನ್ನ ಯೋಜನೆ, ಸರ್ವಶಿಕ್ಷಣ ಅಭಿಯಾನ, ಬೆಂಗಳೂರಿಗೆ ಮೆಟ್ರೊ ಇತ್ಯಾದಿಗಳಿಗೆ ಅಟಲ್‌ ಕಾಲದಲ್ಲೇ ಚಾಲನೆ ಸಿಕ್ಕಿದ್ದು. ಇವುಗಳನ್ನು ನೆನಪಿಸದೇ ಇರುವುದು ಲೋಪವೇ ಸರಿ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !