ಶುಕ್ರವಾರ, ಅಕ್ಟೋಬರ್ 18, 2019
20 °C

ಜಾಗೃತಿಯೇ ಪರಿಹಾರ

Published:
Updated:

ತೂಕದಲ್ಲಿ ಉಂಟಾಗುವ ಮೋಸದ ಬಗ್ಗೆ ‘ಪ್ರಜಾವಾಣಿ’ (ಒಳನೋಟ, ಅ. 6) ಸವಿವರ ಮಾಹಿತಿ ನೀಡಿದೆ.

ಆಧುನಿಕ ಅರ್ಥವ್ಯವಸ್ಥೆಯಲ್ಲಿ ಎಲ್ಲ ವ್ಯವಹಾರಗಳು ಮಾಫಿಯಾ ರೂಪ ತಳೆದಿರುವುದು ದುರದೃಷ್ಟಕರ. ಇಲ್ಲಿ ವಿಶ್ವಾಸಾರ್ಹತೆ ಉಳಿದಿಲ್ಲ. ಇಂತಹ ವ್ಯವಸ್ಥೆಯಲ್ಲಿ ಕಾಯ್ದೆ ಕಾನೂನುಗಳು ಎಷ್ಟೇ ಇದ್ದರೂ ಪ್ರಯೋಜನವಿಲ್ಲ.

ಗ್ರಾಹಕರು ಕೇವಲ ಕೊಳ್ಳುಬಾಕರಾಗದೆ, ಜಾಗೃತರಾಗುವುದೇ ಇದಕ್ಕಿರುವ ಪರಿಹಾರ. ಈ ನಿಟ್ಟಿನಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳಿಗೆ ಸಂಬಂಧಿಸಿದ ಇತರ ಇಲಾಖೆಗಳು ಜಾಗೃತಿ ಅಭಿಯಾನ ನಡೆಸಬೇಕು

-ಕಿಶೋರ್ ಜಿ., ಶಿವಮೊಗ್ಗ

 

Post Comments (+)