ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ಲಾಘನೀಯ ನಿರ್ಧಾರ

Last Updated 14 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅಯೋಧ್ಯೆಯ ಜಮೀನು ವಿವಾದ ಪರಿಹಾರಕ್ಕಾಗಿ ಕಾಯುತ್ತಾ, 27 ವರ್ಷಗಳಿಂದಲೂ ಅನ್ನಾಹಾರ ತ್ಯಜಿಸಿ ಕೇವಲ ಫಲಾಹಾರ ಸೇವಿಸುತ್ತಿದ್ದ ಮಧ್ಯಪ್ರದೇಶದ ಸಂಸ್ಕೃತ ಭಾಷಾ ಶಿಕ್ಷಕಿ ಊರ್ಮಿಳಾ ಚತುರ್ವೇದಿ ಅವರ ದೃಢ ಸಂಕಲ್ಪ ತಿಳಿದು (ಪ್ರ.ವಾ., ನ. 12) ಅಚ್ಚರಿಯಾಯಿತು.

ಸಮಾಜ ಮತ್ತು ದೇಶದ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿ ಮತ್ತು ಕುಟುಂಬದಹಿತಾಸಕ್ತಿಯೇ ಮುಖ್ಯ ಎನ್ನುವವರ ನಡುವೆ, ಅವೆಲ್ಲವನ್ನೂ ಬದಿಗೊತ್ತಿ ಶಿಕ್ಷಕಿ ಕೈಗೊಂಡಿದ್ದ ಈ ನಿರ್ಧಾರ ಶ್ಲಾಘನೀಯ. ಊರ್ಮಿಳಾ ಅವರ ಉಪವಾಸದ ಅವಧಿಯಲ್ಲಿಯೇ ವಿವಾದ ಇತ್ಯರ್ಥಗೊಂಡಿರುವುದು ಖುಷಿಯ ವಿಚಾರ.

-ವಸಂತ ಕುಮಾರ್ ಮಲ್ಲಾಪುರ,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT