ಬ್ಯಾಂಕ್‌, ಕಚೇರಿಗಳಲ್ಲಿ ಮರೆಯಾಗುತ್ತಿದೆ ಕನ್ನಡ

7

ಬ್ಯಾಂಕ್‌, ಕಚೇರಿಗಳಲ್ಲಿ ಮರೆಯಾಗುತ್ತಿದೆ ಕನ್ನಡ

Published:
Updated:

ಕೇಂದ್ರ ಸರ್ಕಾರದ ಕೆಲವು ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಹಲವು ಕಚೇರಿಗಳಲ್ಲಿ ಅನ್ಯಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಅವರಲ್ಲಿ ಬಹಳಷ್ಟು ಮಂದಿಗೆ ಕನ್ನಡ ಭಾಷೆ ಗೊತ್ತಿಲ್ಲ ಅಷ್ಟೇ ಅಲ್ಲ, ಕನ್ನಡ ಕಲಿಯುವ ಆಸಕ್ತಿಯನ್ನೂ ಅವರು ತೋರಿಸುತ್ತಿಲ್ಲ. ಕಚೇರಿಯಲ್ಲಿ ಅವರ ಜೊತೆ ಕೆಲಸ ಮಾಡುವ ಕನ್ನಡಿಗರು ಸಹ ಅವರ ಜೊತೆ ಅವರ ಭಾಷೆಯಲ್ಲೇ ಮಾತನಾಡುತ್ತಾರೆ ಎಂಬುದು ಬೇಸರದ ವಿಚಾರ. ಅನ್ಯಭಾಷಿಕರ ಜೊತೆ ಕನ್ನಡದಲ್ಲಿ ವ್ಯವಹರಿಸಿ ಅವರಿಗೆ ಕನ್ನಡವನ್ನು ಕಲಿಸುವ ಪ್ರಯತ್ನವನ್ನು ಮಾಡುವ ಬದಲು, ತಮಗೂ ಅವರ ಭಾಷೆ ಗೊತ್ತು ಎಂಬ ಹುಂಬತನವನ್ನು ನಮ್ಮವರು ಮೆರೆಯುತ್ತಾರೆ.

ಕಚೇರಿಯಲ್ಲಿ ಕನ್ನಡದಲ್ಲೇ ವ್ಯವಹರಿಸುವಂತೆ ಆಯಾ ಕಚೇರಿಯ ಮುಖ್ಯಸ್ಥರು ಎಲ್ಲ ಸಿಬ್ಬಂದಿಗೆ ಸೂಚನೆ ನೀಡಿದರೆ
ಮಾತ್ರ ಕನ್ನಡ ಉಳಿಯಲು ಸಾಧ್ಯ. ಹಾಗೆಯೇ ಕಚೇರಿಗಳಿಗೆ ಭೇಟಿ ಕೊಡುವ ಜನರೂ ಅನ್ಯಭಾಷಿಕರ ಜೊತೆ ಕನ್ನಡದಲ್ಲೇ
ವ್ಯವಹರಿಸಬೇಕು. ಕನ್ನಡ ಭಾಷೆಯನ್ನು ಕಲಿಯುವಂತೆ ಅವರನ್ನು ಪ್ರೋತ್ಸಾಹಿಸಬೇಕು

ಪದ್ಮಾ ಕೃಷ್ಣಮೂರ್ತಿ, ತುಮಕೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !