ಶನಿವಾರ, ಮೇ 8, 2021
18 °C

ವಿನೂತನ ಚುನಾವಣಾ ತಂತ್ರ: ಎಚ್ಚರವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಸೆಳಕೆ ಅವರು ಮರಾಠಿ ಭಾಷಿಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಜನರಿಂದ ವೋಟು ಕೇಳಿ ನೋಟು ಪಡೆಯುತ್ತಿರುವ ನಡವಳಿಕೆ (ಪ್ರ.ವಾ, ಏ. 6) ಒಪ್ಪುವಂಥದ್ದಲ್ಲ. ಚುನಾವಣಾ ವೆಚ್ಚಕ್ಕೆ ಬಹಿರಂಗವಾಗಿ ದೇಣಿಗೆ ಸಂಗ್ರಹಿಸುವುದಕ್ಕೆ ಅವಕಾಶ ಇರಬಹುದು. ಆದರೆ ಪ್ರಚೋದನಕಾರಿ ಭಾಷಣ ಮಾಡಿ ಹಣ ಸಂಗ್ರಹಿಸುವುದು ಸರಿಯೇ?

ಅಭ್ಯರ್ಥಿಗಳು ಇಂತಿಷ್ಟೇ ಹಣ ಖರ್ಚು ಮಾಡಬೇಕು ಎಂಬ ನಿಯಮವಿದೆ. ಅಭ್ಯರ್ಥಿಗಳು ಇದಕ್ಕೆ ಬದ್ಧರಾಗಿ ಖರ್ಚು ಮಾಡಬೇಕಾಗುತ್ತದೆ. ಜನರಿಗೆ ನೋಟು ಕೊಟ್ಟು ವೋಟು ಪಡೆಯುವಂಥ ಕೆಟ್ಟ ನಡವಳಿಕೆ ಇತ್ತೀಚೆಗೆ ಉಲ್ಬಣಗೊಳ್ಳುತ್ತಿದೆ. ಹೀಗಿರುವಾಗ ಅಭ್ಯರ್ಥಿಗಳು ವಿನೂತನ ತಂತ್ರಗಳನ್ನು ಬಳಸುವುದರ ಬಗ್ಗೆಯೂ ಜನ ಎಚ್ಚರ ವಹಿಸುವುದು ಒಳ್ಳೆಯದು.

-ಡಾ. ಜಿ.ಬೈರೇಗೌಡ, ಬೆಂಗಳೂರು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು