ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಗಡಿಯಲ್ಲಿ ಕಠಿಣ ಕ್ರಮವಿರಲಿ

Last Updated 23 ಫೆಬ್ರುವರಿ 2021, 17:44 IST
ಅಕ್ಷರ ಗಾತ್ರ

ಕೋವಿಡ್ ಹರಡದಂತೆ ನಿಗಾ ವಹಿಸುವುದರ ಭಾಗವಾಗಿ ಕೇರಳದ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಜನರಿಗೆ ತೊಂದರೆಯಾಗಿದ್ದಾಗಿ ವರದಿಯಾಗಿದೆ (ಪ್ರ.ವಾ., ಫೆ. 23). ಆದರೆ ಇಂತಹ ಕ್ರಮಗಳಿಲ್ಲದೆ ಒಳ ನುಸುಳುವುದರಿಂದ ಉಂಟಾಗುವ ತೊಂದರೆಯನ್ನೂ ಗಮನಿಸಬೇಕು.

ಒಬ್ಬ ಕೋವಿಡ್ ಪಾಸಿಟಿವ್ ರೋಗಿಯಿಂದ ನೂರಾರು ಜನರಿಗೆ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಆಗ ರಾಜ್ಯದಲ್ಲಿ ಪುನಃ ಲಾಕ್‌ಡೌನ್ ಹೇರಬೇಕಾಗಿ ಬಂದರೆ ಮತ್ತೆ ಜನ ಅನೇಕಾನೇಕ ತೊಂದರೆಗಳಿಗೆ ಸಿಲುಕುವಂತೆ ಆಗುತ್ತದೆ. ಈಗತಾನೆ ಪುನರ್ ಚಾಲನೆಗೊಂಡಿರುವ ಉದ್ದಿಮೆಗಳು, ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಸ್ಥಗಿತಗೊಳಿಸುವ ಕೆಲಸ ಮತ್ತೊಮ್ಮೆ ಆಗಬೇಕೇ? ಹೀಗಾಗದಂತೆ ಅಧಿಕಾರಿಗಳು ಪ್ರತೀ ಗಡಿಯಲ್ಲೂ ಕಠಿಣ ಕ್ರಮ ಕೈಗೊಂಡು ರಾಜ್ಯದ ಹಿತ ಕಾಯಲಿ.

-ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT