ಹೋಗಿಬನ್ನಿ...

7

ಹೋಗಿಬನ್ನಿ...

Published:
Updated:

ರಾಷ್ಟ್ರ ರಾಜಕಾರಣದ ಅಜಾತಶತ್ರು,ಕವಿ ಹೃದಯಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು ಇಂದು ಬಲಿಷ್ಠ ಭಾರತವನ್ನು ಕಟ್ಟುತ್ತಿವೆ. ಅವರ ರಾಜಕೀಯ ಮುತ್ಸದ್ದಿತನ ಜಾಗತಿಕ ರಾಜಕೀಯಕ್ಕೆ ಯಾವ ಕಾಲಕ್ಕೂ ದಾರಿದೀಪವಾಗಿದೆ.

ಪೋಖ್ರಾನ್ ಪರಮಾಣು ಪರೀಕ್ಷೆ ಯಶಸ್ವಿಯಾದ ನಂತರ ಅವರು ತಮ್ಮ ಕಂಚಿನ ಕಂಠದಲ್ಲಿ ಮಾಡಿದ ಭಾಷಣ ಎಂದಿಗೂ ಮರೆಯಲಾಗದು. ಅವರು ಸಂಸತ್ತಿನಲ್ಲಿ ಎದ್ದು ನಿಂತರೆ ಗಂಟೆಗಟ್ಟಲೆ ಅಸ್ಖಲಿತ ವಾಗ್ಝರಿಯ ಪ್ರವಾಹ. ನಡು ನಡುವೆ ಗಜಲ್, ಕವಿತೆಗಳ ಪರಿಮಳ. ಎಲ್ಲರೂ ಪಕ್ಷಾತೀತವಾಗಿ ಅಟಲ್ ಅವರ ಮಾತಿನ ಸವಿ ಉಂಡವರೇ. ಭಾರತದ ಬಹುತ್ವ ಸಂಸ್ಕೃತಿಗೆ ಅಟಲ್‌ಜೀ ಅವರಂಥ ರಾಜಕೀಯ ಮುತ್ಸದ್ದಿಗಳ ಅಗತ್ಯ ತುಂಬ ಇದೆ. ಒಲ್ಲದ ಮನಸ್ಸಿನಿಂದ ಹೇಳುತ್ತಿದ್ದೇವೆ ‘ಹೋಗಿ ಬನ್ನಿ ಅಟಲಜೀ...’

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !