ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್‌: ಆರ್‌ಬಿಐ ಜಾಣ ನಡೆ

Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಸೋಲಿಸಲಾಗದಿದ್ದರೆ ಅವರನ್ನೇ ಸೇರಿಕೋ (If you cannot beat, then join them) ಎನ್ನುವುದು ಇಂಗ್ಲಿಷ್‌ ಭಾಷೆಯ ಒಂದು ಹಳೆಯ ಗಾದೆ. ಬಿಟ್‌ ಕಾಯಿನ್‌ ರೀತಿಯಲ್ಲೇ ರೂಪಾಯಿ ಡಿಜಿಟಲ್‌ ಆವೃತ್ತಿಯನ್ನು ಅಧಿಕೃತವಾಗಿ ದೇಶದಲ್ಲಿ ಬಿಡುಗಡೆ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಚಿಂತನೆ ನಡೆಸಿರುವುದನ್ನು ಕೇಳಿದಾಗ ಈ ಗಾದೆ ನೆನಪಿಗೆ ಬರುತ್ತದೆ. ಸದ್ಯ ಕೇವಲ ಶ್ರೀಮಂತ ಹೂಡಿಕೆದಾರರಿಗೆ ಸೀಮಿತವಾಗಿರುವ ಬಿಟ್‌ ಕಾಯಿನ್‌ನಂತಹ ಕ್ರಿಪ್ಟೋ ಕರೆನ್ಸಿಗೆ ಭಾರತದಲ್ಲಿ ನಿಷೇಧವಿಲ್ಲದಿದ್ದರೂ ಮಾನ್ಯತೆ ಇಲ್ಲ. ಆದರೆ, ಇದು ಅವ್ಯಾಹತವಾಗಿ ಬೆಳೆಯುತ್ತಿದ್ದು, ಜಾಗತಿಕವಾಗಿ ಪಸರಿಸುತ್ತಿರುವುದರಿಂದ ಇದನ್ನು ನಿಷೇಧ ಮಾಡಲು ಸಾಧ್ಯವಿಲ್ಲ. ಅಂತೆಯೇ ಇದನ್ನು ನಿಯಂತ್ರಿಸಲು‌, ಭಾರಿ ಅಪಾಯ ಸಂಭವಿಸುವ ಮೊದಲು ರಿಸರ್ವ್‌ ಬ್ಯಾಂಕ್ ತಾನೇ ಬಿಟ್‌ ಕಾಯಿನ್‌ ಬಿಡುಗಡೆ ಮಾಡಲು ಹೊರಟಿದೆ.

ಜಗತ್ತಿನಾದ್ಯಂತ ಡಿಜಿಟಲ್‌ ಕರೆನ್ಸಿಗೆ ಬೇಡಿಕೆ ಏರುತ್ತಿದ್ದು, ಪ್ರವಾಹದೊಡನೆ ಈಜಲು ಮತ್ತು ಜನಸಾಮಾನ್ಯರನ್ನು ಸಂಭವನೀಯ ಆರ್ಥಿಕ ಸಂಕಷ್ಟದಿಂದ ದೂರ ಮಾಡುವ ದಿಸೆಯಲ್ಲಿ ರಿಸರ್ವ್‌ ಬ್ಯಾಂಕ್‌ನ ಈ ಕ್ರಮ ಸ್ವಾಗತಾರ್ಹ. ಇದು ಒಂದು ರೀತಿಯಲ್ಲಿ ಖಾಸಗಿ ಲಾಟರಿಗಳ ಹಾವಳಿಯನ್ನು ನಿಯಂತ್ರಿಸಲು ಸರ್ಕಾರವೇ ಲಾಟರಿ ಯೋಜನೆಯನ್ನು ನಡೆಸಿದಂತೆ ಎನ್ನಬಹುದು.

ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT