ಆತ್ಮಪ್ರಶಂಸೆ ಸಾಕು; ಅಭಿವೃದ್ಧಿ ಬೇಕು

ಮಂಗಳವಾರ, ಜೂನ್ 18, 2019
27 °C

ಆತ್ಮಪ್ರಶಂಸೆ ಸಾಕು; ಅಭಿವೃದ್ಧಿ ಬೇಕು

Published:
Updated:

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನೀಡಿದ ಸ್ಥಾನಗಳಿಗಿಂತ ಹೆಚ್ಚು ಸ್ಥಾನ ಕೊಟ್ಟು, ನರೇಂದ್ರ ಮೋದಿಯವರನ್ನು ದೇಶದ ಜನ ಬೆಂಬಲಿಸಿದ್ದಾರೆ. ಆದರೆ, 2014ರಲ್ಲಿ ಕೊಟ್ಟಿದ್ದ ಭರವಸೆಗಳನ್ನು ಕುರಿತ ಚರ್ಚೆ ಈ ಬಾರಿಯ ಚುನಾವಣೆಯಲ್ಲಿ ಮುನ್ನೆಲೆಗೆ ಬಾರದಿದ್ದದ್ದು ದುರದೃಷ್ಟಕರ. ಇದರಲ್ಲಿ ವಿರೋಧ ಪಕ್ಷದವರ ಪಾಲು ಬಹಳಷ್ಟಿದೆ. ಅದೇನೇ ಇರಲಿ, ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಮೋದಿಯವರಿಗೆ ಮತ್ತೊಂದು ಸುವರ್ಣಾವಕಾಶ ದೊರೆತಿದೆ.

ಕಳೆದ ಬಾರಿಯಂತೆ ಅನಗತ್ಯ ವಿಷಯಗಳ ಬಗ್ಗೆ ಗಮನ ಹರಿಸದಿದ್ದರೆ ಅದು ಸಾಧ್ಯ. ಎಲ್ಲದಕ್ಕೂ ನೆಹರೂ ಪರಿವಾರವನ್ನು, ಕಾಂಗೆಸ್ಸನ್ನು ಎಳೆದು ತರುವ ಪ್ರವೃತ್ತಿ ನಿಲ್ಲಿಸಬೇಕು. ನಮೋ ಟಿ.ವಿ ಇದ್ದಕ್ಕಿದಂತೆ ಅಂತರ್ಧಾನವಾದಂತೆ ಬಿಜೆಪಿ ಐ.ಟಿ ಸೆಲ್ ಅನ್ನೂ ಬಂದ್‌ ಮಾಡಿ, ವೃಥಾ ಆತ್ಮಪ್ರಶಂಸೆಯಲ್ಲಿ ಕಾಲ ಕಳೆಯುವುದನ್ನು ನಿಲ್ಲಿಸಬೇಕು.

ಮಹಿಳೆಯರು, ರೈತರು, ಕಾರ್ಮಿಕರು, ದಲಿತರ ಕೂಗಿಗೆ ಕಿವಿಗೊಡಬೇಕು. ಅವರಿಗೆ ಸಾಂತ್ವನ ಹೇಳುವುದರ ಜತೆಗೆ, ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಾವು ಮಾತ್ರ ದೇಶಭಕ್ತರು, ತಮ್ಮನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳು ಎಂದು ಬಿಂಬಿಸುವ ಪ್ರವೃತ್ತಿಯನ್ನು ಬಿಜೆಪಿಯವರು ಮೊದಲು ಬಿಡಬೇಕು. ಸರ್ಕಾರದ ಕಾರ್ಯಕ್ರಮಗಳ ಪ್ರಗತಿಗೆ ಸಂಬಂಧಿಸಿದ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿರಬೇಕು.

– ಚಂದ್ರಪ್ರಭ ಕಠಾರಿ, ಬೆಂಗಳೂರು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !