ಗುರುವಾರ , ಅಕ್ಟೋಬರ್ 21, 2021
21 °C

ಬೇಟೆಗಾರರ ಬೇಟೆಯಾಡಲು ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ ತಾಲ್ಲೂಕಿನಲ್ಲಿ ಪ್ರಾಣಿ ಉರುಳಿಗೆ ಸಿಲುಕಿ ಕಪ್ಪು ಚಿರತೆಯೊಂದು ಬಲಿಯಾಗಿರುವುದು (ಪ್ರ.ವಾ., ಆ. 28) ನೋವಿನ ಸಂಗತಿ. ಶಿರಸಿ ಭಾಗದಲ್ಲಿ ಮೊದಲ ಬಾರಿಗೆ ಕಾಣಸಿಕ್ಕಂತಹ ಈ ಕಪ್ಪು ಚಿರತೆ ನಿಸರ್ಗದ ಅಪರೂಪದ ಸೃಷ್ಟಿಗಳಲ್ಲೊಂದು. ಇದೇ ತೆರನಾಗಿ ಮುಂಗುಸಿ, ಕಬ್ಬೆಕ್ಕು, ಉಡ, ನರಿ, ಮೊಲ, ಮುಳ್ಳುಹಂದಿಗಳಲ್ಲದೆ ಹಲವಾರು ಪಕ್ಷಿಗಳನ್ನೂ ಬೇಟೆಗಾರರು ಯಾವುದೇ ಅಡೆತಡೆ ಇಲ್ಲದೆ ಪ್ರತಿನಿತ್ಯ ಬೇಟೆಯಾಡುತ್ತಿದ್ದಾರೆ. ಕಾನೂನಿನ ಬಗ್ಗೆ ಕಿಂಚಿತ್ತೂ ಗೌರವ, ಭಯವಿಲ್ಲದಿರುವುದು ಅವರ ಅಟ್ಟಹಾಸಕ್ಕೆ ಕಾರಣವಾಗಿದೆ.

ಎಷ್ಟೋ ವೇಳೆ ಇವರು ಪ್ರಾಣಿಗಳನ್ನು ಬೇಟೆಯಾಡಿ ನಿರ್ದಯವಾಗಿ ಕೊಲ್ಲುವ ಚಿತ್ರ ಮತ್ತು ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಶೌರ್ಯ ಪ್ರದರ್ಶನ ಮಾಡುತ್ತಾರೆ. ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರೂ ಸಹಕರಿಸಿ ಇಂತಹ ಬೇಟೆಗಾರರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಆಗಮಾತ್ರ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ. ಇಲ್ಲವಾದಲ್ಲಿ ಮೊದಲು ಅವುಗಳ ಅಳಿವು, ನಂತರದ್ದು ನಮ್ಮದೇ, ಅಲ್ಲವೆ?

–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು